ಉಡುಪಿ: ಖಾಸಗಿ ಬಸ್ ಗಳಿಂದ ಹಬ್ಬದ ಸೀಸನ್ ನಲ್ಲಿ ದುಬಾರಿ ದರ ವಸೂಲಿ ಹಿನ್ನಲೆಯಲ್ಲಿ ಹಲವೆಡೆ ಆರ್ ಟಿ ಒ ಅಧಿಕಾರಿಗಳು ಖಾಸಗಿ ಬಸ್ ಗಳ ತಪಾಸಣೆ ನಡೆಸಿದ್ದಾರೆ.
ಉಡುಪಿಯಲ್ಲೂ ಫೀಲ್ಡಿಗಿಳಿದ ಆರ್ ಟಿ ಒ ಅಧಿಕಾರಿಗಳು ,ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ತಪಾಸಣೆ ನಡೆಸಿದರು.
ಖಾಸಗಿ ಬಸ್, ಖಾಸಗಿ ಟೂರಿಸ್ಟ್ ವಾಹನಗಳ ತಪಾಸಣೆ ನಡೆಸಿದ ಅಧಿಕಾರಿಗಳು ಟಿಕೆಟ್ ಗೆ ನಿಗಸಿ ಮಾಡಿರುವ ದರಗಳನ್ನು ಪರಿಶೀಲಿಸಿದರು.
ಹಬ್ಬದ ಸಂಧರ್ಬದಲ್ಲಿ ಹೆಚ್ಚಿನ ದರ ವಸೂಲಿ ಮಾಡುತ್ತಿವೆ ಎಂಬ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಇನ್ಸ್ಪೆಕ್ಟರ್ ಸಂತೋಷ್ ಶೆಟ್ಟಿ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು.ಅಧಿಕ ದರ ವಸೂಲಿ ಮಾಡಿದ ಬಸ್ ಗಳಿಗೆ "ದಂಡ"ಪ್ರಹಾರ ನಡೆಸಲಾಯಿತು.
PublicNext
03/10/2022 10:21 pm