ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ : ಪಿಎಫ್‌ಐ ಕಾರ್ಯಕರ್ತನ ಮನೆಗೆ ಪೊಲೀಸ್ ದಾಳಿ

ವಿಟ್ಲ: ರಾಜ್ಯದಲ್ಲಿನ ಪ್ರಮುಖ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜ್ಯ ಪೋಲೀಸ್ ನಿರ್ದೇಶನದಂತೆ ಬಂಟ್ವಾಳ ಹಾಗೂ ವಿಟ್ಲ ಪೋಲೀಸರ ತಂಡ ಮುಂಜಾನೆ ವೇಳೆ ಬೊಳಂತೂರು ವ್ಯಕ್ತಿಯೋರ್ವನ ಮನೆಗೆ ದಾಳಿ ನಡೆಸಿ ವಿಚಾರಣೆ ನಡೆಸಿ ಮಾಹಿತಿ ಕಲೆಹಾಕುತ್ತಿದೆ. ಬೊಳಂತೂರು ನಿವಾಸಿ ಮಹಮ್ಮದ್ ಕುಟ್ಟಿ ಎಂಬವರ ಪುತ್ರ ಮಹಮ್ಮದ್ ತಬ್ಸೀರ್ ಎಂಬವರ ಮನಗೆ ಮುಂಜಾನೆ ಮೂರು ಗಂಟೆ ವೇಳೆ ಪೋಲೀಸ್ ದಾಳಿ ನಡೆಸಿದೆ.

ಯಾವ ಪ್ರಕರಣಕ್ಕೆ ಎಂಬ ವಿಚಾರವನ್ನು ಇಲ್ಲಿನ ಪೋಲೀಸರು ಮಾಹಿತಿ ನೀಡುತ್ತಿಲ್ಲ.

ವಿಚಾರಣೆಯ ದೃಷ್ಟಿಯಿಂದ ಗೌಪ್ಯತೆ ಕಾಪಾಡಲು ರಾಜ್ಯ ಪೋಲೀಸರ ನಿರ್ದೇಶನದಂತೆ ಅವರು ಮಾಹಿತಿ ನೀಡುತ್ತಿಲ್ಲ ಎಂಬ ವಿಚಾರ ಲಭ್ಯವಾಗಿದೆ.

ರಾಜ್ಯದ ಪ್ರಕರಣವೊಂದಕ್ಕೆ ಹಲವು ವಿಚಾರಗಳನ್ನು ಕುರಿತು ಈ ದಾಳಿ ನಡೆದಿದ್ದು, ತಬ್ಸೀರ್ ಅವರಿಗೆ ಸೇರಿದ ಎರಡು ಮನೆಗಳಿಗೆ ಅಂದರೆ ಒಂದು ಹಳೆಯ ಮನೆ ಹಾಗೂ ಹೊಸ ಮನೆಗಳಿಗೆ ದಾಳಿ ನಡೆಸಿ ಅ ಪ್ರಕೆ ಸಂಬಂಧ ಎಲ್ಲಾ ಮಾಹಿತಿ ಕಲೆ ಹಾಕಲಾಗಿತ್ತಿದೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ,ವಿಟ್ಲ ಇನ್ಸ್ ಪೆಕ್ಟರ್ ನಾಗರಾಜ್ ಎಚ್, ನಗರ ಠಾಣಾ ಪೋಲೀಸ್ ಎಸ್. ಐ.ಅವಿನಾಶ್, ಗ್ರಾಮಾಂತರ ಎಸ್ ಐ ಹರೀಶ್, ವಿಟ್ಲ ಎಸ್.ಐ.ಸಂದೀಪ್ ಸಹಿತ ಇಡೀ ಪೋಲೀಸ್ ತಂಡ ಇಲ್ಲಿ ಮೊಕ್ಕಾಂ ಇದ್ದು ಭದ್ರತೆ ಒದಗಿಸಿ ತನಿಖೆ ನಡೆಸುತ್ತಿದೆ. ಹೆಚ್ಚಿನ ಮಾಹಿತಿ ಪೋಲಿಸರು ನೀಡಿದ ಬಳಿಕ ತಿಳಿಯಬೇಕು.

Edited By : Shivu K
PublicNext

PublicNext

22/09/2022 09:20 am

Cinque Terre

35.48 K

Cinque Terre

8