ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ : BREAKING ಬಿಹಾರ ಪ್ರಕರಣ ವಿಚಾರದಲ್ಲಿ ತನಿಖೆ: ಎನ್.ಐ.ಎ.ವಿಚಾರಣೆ ಬಳಿಕ ರಿಯಾಝ್ ಪ್ರತಿಕ್ರಿಯೆ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನಲ್ಲಿರುವ ಎಸ್.ಡಿ.ಪಿ.ಐ. ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮನೆಗೆ ಗುರುವಾರ ಬೆಳಗ್ಗೆ ಎನ್.ಐ.ಎ. ಅಧಿಕಾರಿಗಳ ತಂಡ ಬಂಟ್ವಾಳ ಪೊಲೀಸರ ಸಹಕಾರದಿಂದ ದಾಳಿ ನಡೆಸಿ ವಿಚಾರಣೆ ನಡೆಸಿದೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಿಯಾಝ್, ನಿಷ್ಪಕ್ಷಪಾತ ತನಿಖೆಗೆ ತಾನು ಸದಾ ಸಿದ್ಧ ಎಂದಿದ್ದಾರೆ.

ಇತ್ತೀಚೆಗೆ ಬಿಹಾರದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಎನ್.ಐ.ಎ. ಅಧಿಕಾರಿಗಳು ನನ್ನ ಮನೆಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಾನು ರಾಷ್ಟ್ರೀಯ ಕಾರ್ಯದರ್ಶಿ ಆಗಿರುವುದರೊಂದಿಗೆ ಬಿಹಾರದ ಉಸ್ತುವಾರಿಯೂ ಆಗಿರುತ್ತೇನೆ, ಅಲ್ಲಿಗೆ ಆಗಾಗ ಹೋಗುತ್ತಿರುತ್ತೇನೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಘಟನೆಗೂ ತನಗೂ ಸಂಬಂಧವಿದೆಯೇ ಎಂಬುದನ್ನು ವಿಚಾರಿಸಲು ಬಂದಿದ್ದರು.

ನನ್ನ ಮನೆಗೆ ಆಗಮಿಸಿ ಬೆಳಗ್ಗೆಯಿಂದ ಮಧ್ಯಾಹ್ನವರೆಗೂ ವಿಚಾರಣೆ ನಡೆಸಿ, ಕೆಲವೊಂದು ದಾಖಲೆಗಳು ಹಾಗೂ ನನ್ನ ಹಾಗೂ ನನ್ನ ಪತ್ನಿಯ ಮೊಬೈಲ್ ಫೋನುಗಳನ್ನು ಅವರು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು. ತನಿಖೆ ಪಾರದರ್ಶಕವಾಗಿರಲಿ ಎಂದವರು ಒತ್ತಾಯಿಸಿದರು.

Edited By :
PublicNext

PublicNext

08/09/2022 03:59 pm

Cinque Terre

28.9 K

Cinque Terre

1