ಮಂಗಳೂರು: ಸುರತ್ಕಲ್ ಜಂಕ್ಷನ್‌ನಲ್ಲಿ 'ವೀರ್ ಸಾವರ್ಕರ್ ವೃತ್ತ' ಎಂಬ ಬ್ಯಾನರ್‌ವೊಂದು ಪ್ರತ್ಯಕ್ಷವಾಗಿದ್ದು ಪೊಲೀಸರು ಆಗಮಿಸಿ ಬ್ಯಾನರ್ ತೆರವುಗೊಳಿಸಿದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಜಂಕ್ಷನ್‌ನಲ್ಲಿ ನಡೆದಿದೆ.
ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಬ್ಯಾನರ್ ತೆರವುಗೊಳಿಸಿದ್ದಾರೆ. ಸುರತ್ಕಲ್ ಮೇಲ್ಸೆತುವೆಯ ಅಡಿಯಲ್ಲಿ ಹಾಕಲಾಗಿದ್ದ ಬ್ಯಾನರ್, ಈ ಹಿಂದೆ ಸುರತ್ಕಲ್ ಜಂಕ್ಷನ್‌ನಲ್ಲಿ ಸಾವರ್ಕರ್ ವೃತ್ತ ನಾಮಕರಣ ವಿಚಾರದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಇದೀಗ ಮತ್ತೆ ಸಾವರ್ಕರ್ ಭಾವಚಿತ್ರವಿರುವ ಬ್ಯಾನರ್ ಸುರತ್ಕಲ್ ಮೇಲ್ಸೇತುವೆಯಲ್ಲಿ ಕಾಣಿಸಿಕೊಂಡಿದ್ದು ಬಳಿಕ ತೆರವುಗೊಳಿಸಲಾಗಿದೆ.
PublicNext
14/08/2022 07:59 pm