ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಓವರ್ ಸ್ಪೀಡ್ ಆರೋಪ, ದಂಡ ಕಟ್ಟದ ಬಸ್ ಚಾಲಕ ಪೊಲೀಸ್ ವಶಕ್ಕೆ

ಉಳ್ಳಾಲ: ಸಿಟಿ ಬಸ್‌ವೊಂದು ಓವರ್ ಸ್ಪೀಡ್ ಚಲಿಸಿದ ಆರೋಪದಲ್ಲಿ ಟ್ರಾಫಿಕ್ ಎಎಸ್‌ಐ ದಂಡ ವಿಧಿಸಿದೆ. ಇದನ್ನು ಪ್ರಶ್ನಿಸಿದ ಬಸ್ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವಶಕ್ಕೆ ತೆಗೆದ ಘಟನೆ ನಡೆದಿದ್ದು, ರೊಚ್ಚಿಗೆದ್ದ ಬಸ್‌ ಚಾಲಕರು, ನಿರ್ವಾಹಕರು ತಲಪಾಡಿ ರೂಟ್‌ನ ಎಲ್ಲಾ ಬಸ್‌ಗಳನ್ನು ನಿಲ್ಲಿಸಿ ಮುಷ್ಕರ ನಡೆಸಿದ್ದಾರೆ.

ಮಂಗಳೂರಿನಿಂದ ತಲಪಾಡಿಗೆ ತೆರಳಿ ಹಿಂತಿರುಗುತ್ತಿದ್ದ ಉಷಾ ಟ್ರಾವೆಲ್ಸ್‌ ಅನ್ನು ತಲಪಾಡಿಯಲ್ಲಿ ಗಸ್ತಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಎಎಸ್‌ಐ ರಾಬರ್ಟ್ ಲಸ್ರಾದೊ ತಡೆದು ಓವರ್ ಸ್ಪೀಡ್ ಕಾರಣಕ್ಕೆ 1,000 ರೂಪಾಯಿ ದಂಡ ವಿಧಿಸಿದ್ದಾರಂತೆ. ಬಸ್‌ನ ನಿರ್ವಾಹಕರಾದ ದಯಾನಂದ್ ಅವರು ನಾವು ವೇಗವಾಗಿ ಬಂದಿಲ್ಲ. ಅಷ್ಟೇ ಅಲ್ಲದೆ ಕಲೆಕ್ಷನ್ ಕೂಡ ಈಗ ಕಮ್ಮಿಯಾಗಿದ್ದು, ಅಷ್ಟು ದಂಡ ಕಟ್ಟಲು ಸಾಧ್ಯವಿಲ್ಲ ಎಂದು ಗೋಗರೆದಿದ್ದರಂತೆ. ಈ ವೇಳೆ ಲಸ್ರಾದೊ ಅವರು ದಯಾನಂದ್ ಅವರಲ್ಲಿ ಬಸ್‌ನ ದಾಖಲೆ ಕೇಳಿದ್ದಾರೆ. ದಾಖಲೆಗಳು ಆಫೀಸಲ್ಲಿ ಇದೆ ಎಂದು ಉತ್ತರಿಸಿದಾಗ ಲಸ್ರಾದೊ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ನಿರ್ವಾಹಕ ದಯಾನಂದ್ ಆರೋಪಿಸಿದ್ದಾರೆ.

ದಂಡ ಕಟ್ಟದ ಚಾಲಕ ಅಭಿರಾಜ್ ಅವರನ್ನ ಲಸ್ರಾದೊ ದೂರಿನ ಮೇರೆಗೆ ಉಳ್ಳಾಲ ಪೊಲೀಸರು ವಶಕ್ಕೆ ಪಡೆದು ವಾಹನದಲ್ಲಿ ಎಳೆದೊಯ್ದಿದ್ದು ಬಸ್ಸು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ. ಬಸ್‌ ಚಾಲಕ ಅಭಿರಾಜನ್ನ ಬಿಡುಗಡೆಗೊಳಿಸದೆ ಇದ್ದರೆ ಮುಷ್ಕರ ಮುಂದುವರೆಸೋದಾಗಿ ಬಸ್ ನೌಕರರು ಹೇಳಿದ್ದಾರೆ. ದಿಢೀರ್ ಸಿಟಿ ಬಸ್ ಮುಷ್ಕರದಿಂದ ಪ್ರಯಾಣಿಕರು ಕಂಗಾಲಾಗಿದ್ದು ಸರಕಾರಿ ಬಸ್‌ಗಳನ್ನ ಕಾಯುವಂತಾಗಿದೆ.

ಟ್ರಾಫಿಕ್ ಎಎಸ್‌ಐ ಲಸ್ರಾದೊ ಅವರು ಈ ಹಿಂದೆನೂ ತೊಕ್ಕೊಟ್ಟು ಪ್ಲೈ ಓವರ್ ಕೆಳಗಡೆ ಕಾರೊಂದನ್ನು ನಿಲ್ಲಿಸಿ ಅದರಲ್ಲಿದ್ದ ಕೊರಗಜ್ಜ ದೈವದ ಸ್ಟಿಕ್ಕರನ್ನು ತೆಗೆಸಲು ಚಾಲಕನಲ್ಲಿ ಹೇಳಿ ಹಿಂದೂ ಸಂಘಟನೆಗಳ ಆಕ್ರೋಶ, ಪ್ರತಿಭಟನೆಗೆ ಆಹಾರವಾಗಿದ್ದರು.

Edited By : Nagesh Gaonkar
Kshetra Samachara

Kshetra Samachara

13/08/2022 04:00 pm

Cinque Terre

4.53 K

Cinque Terre

0