ಮಂಗಳೂರು: ಸರಣಿ ಹತ್ಯೆಯ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಇಂದಿನಿಂದ ಮೂರು ದಿನಗಳ ಕಾಲ ರಾತ್ರಿ ಬಂದ್ ಗೆ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ.
ಸಂಜೆ ಆರು ಗಂಟೆಯಾಗುತ್ತಲೇ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ತುರ್ತು ಅಗತ್ಯವಿರುವ ಸೇವೆಗಳಿಗೆ ಮಾತ್ರ ರಿಯಾಯಿತಿಯಿದ್ದು, ಮಿಕ್ಕ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗಿದೆ.
ಅಲ್ಲದೆ ಆರು ಗಂಟೆಯ ಬಳಿಕ ಜನ ಸಂಚಾರಕ್ಕೂ ನಿಷೇಧವಿದ್ದು, ಎಲ್ಲರೂ ಮನೆಗೆ ಹೋಗುವ ಧಾವಾಂತದಲ್ಲಿರುವಂತೆ ಕಂಡು ಬಂದಿತು. ಪೊಲೀಸರು ಆದಷ್ಟು ಶೀಘ್ರವೇ ಮನೆಗೆ ಹೋಗುವಂತೆ ಎಲ್ಲಾ ವಾಹನ ಚಾಲಕರಿಗೆ ಸೂಚನೆ ನೀಡುತ್ತಿದ್ದರು. ಅಲ್ಲದೆ ಚೆಕ್ ಪೋಸ್ಟ್ ಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ತಪಾಸಣೆ ಮಾಡುವ ದೃಶ್ಯವೂ ಕಂಡು ಬಂದಿತು.
Kshetra Samachara
29/07/2022 10:22 pm