ಉಡುಪಿ: ಜಿಲ್ಲೆಯಲ್ಲಿ ನಡಯುತ್ತಿರುವ ಅಹಿತಕರ ಘಟನೆಗಳು ಖಂಡನೀಯ ಮತ್ತು ವಿಷಾದನೀಯ. ಯಾವುದೇ ಕಾರಣಕ್ಕೂ ಶಾಂತಿ ಕದಡಬೇಡಿ ,ಕಾನೂನು ಕೈೆತ್ತಿಕೊಳ್ಳದಿರಿ. ಕಾನೂನನ್ನು ಗೌರವಿಸಿ ಎಲ್ಲರೂ ಶಾಂತಿ ಸೌಹಾರ್ದತೆ ಕಾಪಾಡಬೇಕೆಂದು ವಿನಂತಿಸುತಿದ್ದೇನೆ.ಸರಕಾರ ಮತ್ತು ಗೃಹ ಇಲಾಖೆ ಈ ಬಗ್ಗೆ ಮುಂಜಾಗ್ರತೆ ಕ್ರಮ ಕೈಗೊಳ್ಳ ಬೇಕು. ಈಗ ನಡೆದಿರುವ ಮೂರು ಅಮಾಯಕರ ಕೊಲೆಗೆ ಕಾನೂನು ರೀತಿಯ ಶಿಕ್ಷೆ ನೀಡಬೇಕು ಎಂದು ಖಾಝಿ ಮಾಣಿ ಉಸ್ತಾದ್ ಆಗ್ರಹಿಸಿದ್ದಾರೆ.
ಸಂಬಂಧಪಟ್ಟ ನಾಯಕರು ತಮ್ಮ ತಮ್ಮ ಮೊಹಲ್ಲಾಗಳಲ್ಲಿ ಈ ಬಗ್ಗೆ ಶಾಂತಿಯ ಸಂದೇಶವನ್ನು ನೀಡಬೇಕೆಂದು ಉಡುಪಿ,ಹಾಸನ ,ಚಿಕ್ಕಮಗಳೂರು ಹಾಗೂ ಶಿವಮುಗ್ಗ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿದ್ದಾರೆ.
Kshetra Samachara
29/07/2022 12:46 pm