ಕಾಪು: ಜಿಲ್ಲೆಯ ಪ್ರಸಿದ್ಧ ಶಂಕರಪುರ ಮಲ್ಲಿಗೆ ದರ ಭಾರೀ ಇಳಿಕೆಯಾಗಿದ್ದು, ಮಂಗಳವಾರ ಕಟ್ಟೆಯಲ್ಲಿ ಅಟ್ಟೆಗೆ 530 ರೂ. ಲಭಿಸಿದೆ. ಮಾರುಕಟ್ಟೆಯಲ್ಲಿ 640 ರೂ.ಗೆ ಮಾರಾಟವಾಗಿದೆ. ಭಟ್ಕಳ ಮಲ್ಲಿಗೆ ದರ ಇಳಿಕೆಯಾಗಿದ್ದು, ಕಟ್ಟೆಯಲ್ಲಿ 330 ರೂ. ಲಭಿಸಿದೆ. ಮಾರುಕಟ್ಟೆಯಲ್ಲಿ 420 ರೂ.ಗೆ ಮಾರಾಟವಾಗಿದೆ.
ಸೋಮವಾರ ಶಂಕರಪುರ ಮಲ್ಲಿಗೆಗೆ 1300 ರೂ.ಹಾಗೂ ಭಟ್ಕಳ ಮಲ್ಲಿಗೆಗೆ 430 ರೂ. ನಿಗದಿಯಾಗಿತ್ತು.ಸದ್ಯ ಬೇಡಿಕೆ ಕುಸಿದು ಇಳುವರಿ ಅಧಿಕಗೊಂಡ ಕಾರಣ ದರ ಕುಸಿದಿದೆ ಎನ್ನಲಾಗಿದೆ. ಕರಾವಳಿಯಲ್ಲಿ ಮುಂದಿನ ತಿಂಗಳಿನಿಂದ ಹಬ್ಬ ಹರಿದಿನಗಳು ಪ್ರಾರಂಭವಾಗಲಿದ್ದು ಆ ಹೊತ್ತಿಗೆ ದರ ಭಾರೀ ಏರಿಕೆ ಕಾಣುವ ನಿರೀಕ್ಷೆ ಇದೆ
Kshetra Samachara
20/07/2022 04:25 pm