ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಉಗ್ರ ಚಟುವಟಿಕೆಗಳ ನಿಗ್ರಹಕ್ಕೆ ಆಂತರಿಕ ಭದ್ರತಾ ವಿಭಾಗದಡಿ (ಐಎಸ್ ಡಿ) ಕಾರ್ಯಾಚರಿಸಲು ಭಯೋತ್ಪಾದನಾ ನಿಗ್ರಹ ತಂಡ ಸನ್ನದ್ಧಗೊಂಡಿದೆ.
35 ಪೊಲೀಸ್ ಸಿಬ್ಬಂದಿ ಮಂಗಳೂರಿನ ಭಯೋತ್ಪಾದನಾ ನಿಗ್ರಹ ತಂಡದಲ್ಲಿದ್ದಾರೆ. ಬೆಂಗಳೂರಿನ ಕೂಡ್ಲುವಿನ ಸೆಂಟರ್ ಫಾರ್ ಕೌಂಟರ್ ಟೆರರಿಸಂನಲ್ಲಿ 2 ತಿಂಗಳ ತರಬೇತಿ ಮುಗಿಸಿ ಮಂಗಳೂರಿಗೆ ಆಗಮಿಸಿದ್ದಾರೆ. ಈ ತಂಡವು ಭಯೋತ್ಪಾದನೆ ಸೇರಿದಂತೆ ಅತೀ ಗಣ್ಯರ ಭದ್ರತಾ ಉಸ್ತುವಾರಿಯನ್ನೂ ನಿರ್ವಹಿಸಲಿದೆ.
ತಂಡದ ಕಾರ್ಯಕ್ಷಮತೆ ಬಗ್ಗೆ ಇಂದು ಪೊಲೀಸ್ ಮೈದಾನದಲ್ಲಿ ಅಣಕು ಪ್ರದರ್ಶನ ನಡೆಯಿತು. ಉಗ್ರ ದಾಳಿ ವೇಳೆ ಮಾಡಬೇಕಾದ ಕಾರ್ಯಾಚರಣೆ ಬಗ್ಗೆ ಅಣುಕು ಪ್ರದರ್ಶನ ನಡೆಯಿತು. ಭಾರೀ ಪ್ರತಿಭಟನೆಯನ್ನು ಎದುರಿಸಲು ವರುಣ ಎಂಬ ಹೊಸ ಜಲಫಿರಂಗಿ ವಾಹನವು ಈ ತಂಡದಲ್ಲಿದೆ.
ಈ ಮೂಲಕ ಮಂಗಳೂರು ಪೊಲೀಸ್ ಇಲಾಖೆಗೆ ಜಲಫಿರಂಗಿಯ ಬಲ ಬಂದಂತಾಗಿದೆ. ತಲಾ 15 ಮಂದಿಯನ್ನೊಳಗೊಂಡ ಎರಡು ತಂಡಗಳು ಕರ್ತವ್ಯ ನಿರ್ವಹಿಸಲಿವೆ. ರಜೆ ಸಂದರ್ಭ ಕರ್ತವ್ಯ ನಿರ್ವಹಿಸಲು ಐವರು ಹೆಚ್ಚುವರಿ ಸಿಬ್ಬಂದಿ ಈ ತಂಡದಲ್ಲಿದ್ದಾರೆ. ಈ ತಂಡಕ್ಕೆ ಪ್ರತ್ಯೇಕ ಸಮವಸ್ತ್ರ ಇರಲಿದೆ.
PublicNext
16/06/2022 10:23 pm