ಪಡುಬಿದ್ರಿ: ಉಚ್ಚಿಲದ ಭಾಸ್ಕರ ನಗರ ಬಳಿಯ ಮನೆಯೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಪಡುಬಿದ್ರಿ ಪೊಲೀಸರು ದಾಳಿ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿ, ಒಂದು ಹಸು ಮತ್ತು ಮಾರಾಟಕ್ಕೆ ಕಡಿಯಲಾದ ಮಾಂಸವನ್ನು ವಶ ಪಡಿಸಿದ್ದಾರೆ.
ಭಾಸ್ಕರನಗರದ ಸಬಾನ್ ಎಂಬಾತನ ಮನೆಯಲ್ಲಿ ಈ ಕಸಾಯಿಖಾನೆ ಇದ್ದು, ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು.
ಮಹಮ್ಮದ್ ರಫೀಕ್, ಇಲಿಯಾಸ್, ಮಹಮ್ಮದ್ ಮೊಹಿದ್ದೀನ್, ಮೊಯ್ದಿನಬ್ಬ ಬಂಧಿತರು. ಪ್ರಮುಖ ಆರೋಪಿ ದಿಯು ರಫೀಕ್ ಪರಾರಿಯಾಗಿದ್ದಾನೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Kshetra Samachara
02/06/2022 10:06 pm