ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಸಮಿತಿಗೆ ಮೂಡುಬಿದಿರೆ ವಕೀಲ ಶಾಂತಿಪ್ರಸಾದ್ ಹೆಗ್ಡೆ ನೇಮಕ

ಮೂಡುಬಿದಿರೆ: ಪಿಲಿಕುಳದ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಮಟ್ಟದ ಸಲಹಾ ಸಮಿತಿಗೆ ಮೂಡುಬಿದಿರೆಯ ವಕೀಲರಾದ ಶಾಂತಿಪ್ರಸಾದ್ ಹೆಗ್ಡೆ ಇವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಸರ್ಕಾರವು ನೇಮಕ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸಲಹಾ ಸಮಿತಿಯು ಪಶ್ಶಿಮ ಘಟ್ಟದ ಜೀವ- ಪರಿಸರ ಸಮತೋಲನದ ಬಗ್ಗೆ, ಔಷಧೀಯ ಸಸ್ಯ ಉದ್ಯಾನವನದ ಸ್ಥಾಪನೆಗೆ ಆದ್ಯತೆ ನೀಡುವುದು ಹಾಗೂ ರೈತಾಪಿ ಜನರ ಆರ್ಥಿಕ ಮಟ್ಟದ ಸುಧಾರಣೆಗಾಗಿ ನೀರಿನ ಸಂರಕ್ಷಣೆ, ಸಾವಯುವ ಕೃಷಿ ಮುಂತಾದ ವಿಚಾರಗಳ ಬಗ್ಗೆ ಕಾರ್ಯಗಾರಗಳನ್ನು ನಡೆಸಲು ಅವಶ್ಯವಿರುವ ಸಂಸ್ಥೆಗಳನ್ನು ಪ್ರಾರಂಭಿಸುವ ಬಗ್ಗೆ ಆದ್ಯತೆ ನೀಡಬೇಕಿದೆ.

ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಶಿಫಾರಸ್ಸಿನ ಮೇರೆಗೆ ಈ ನೇಮಕವು ನಡೆದಿದ್ದು ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರು ಕೂಡ ಈ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

26/05/2022 02:15 pm

Cinque Terre

3.14 K

Cinque Terre

0