ಉಡುಪಿ: ಜಿಲ್ಲೆಯಲ್ಲಿ 10 ದಿನಗಳ ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಪ್ರಮುಖ ಜಂಕ್ಷನ್ ಮತ್ತು ಗಡಿ ಭಾಗಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎಸ್ಪಿ ವಿಷ್ಣುವರ್ಧನ ,
ಅಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ಸಮಸ್ಯೆ ಇಲ್ಲ. ಮೆಡಿಕಲ್, ಆಸ್ಪತ್ರೆ ಓಡಾಟಕ್ಕೂ ಯಾವುದೇ ಅಡ್ಡಿ ಇಲ್ಲ.
ಆದರೆ ರಾತ್ರಿ 10 ರ ನಂತರ ಯಾವುದೇ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲ. ನಗರ ಮತ್ತು ಜಂಕ್ಷನ್ ಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಿದ್ದೇವೆ.ಆಹಾರ ವಸ್ತುಗಳ ಸರಬರಾಜು ಎಂದಿನಂತೆ ನಡೆಯಲಿದೆ.ಸಂಚಾರ ಸಂದರ್ಭ ಸೂಕ್ತ ದಾಖಲೆ ಇಟ್ಟುಕೊಳ್ಳಬೇಕು.ಟ್ಯಾಕ್ಸಿ, ಆಟೋಗಳ ಓಡಾಟಕ್ಕೂ ಅವಕಾಶ ಇದೆ ಎಂದು ಉಡುಪಿ ಎಸ್ ಪಿ ವಿಷ್ಣುವರ್ಧನ ಹೇಳಿದ್ದಾರೆ.
Kshetra Samachara
28/12/2021 09:25 pm