ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 35 ಪ್ರತಿಭಟನಾಕಾರರ ಮೇಲೆ ಪೊಲೀಸ್ ಕೇಸ್ : ಎಸ್ಡಿಪಿಐ ನಾಯಕರು ಗರಂ!

ಉಡುಪಿ: ಇದೇ ತಿಂಗಳ 14 ರಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಉಡುಪಿಯಲ್ಲಿ ದೆಹಲಿ ಅತ್ಯಾಚಾರ ಖಂಡಿಸಿ ಪ್ರತಿಭಟನೆ ನಡೆಸಿತ್ತು.ಇದೀಗ ಉಡುಪಿ ಪೊಲೀಸರು ಪ್ರತಿಭಟನಕಾರರ ಮೇಲೆ ಕೇಸ್ ಜಡಿದಿದ್ದು ,ಎಸ್ಡಿಪಿಐ ನಾಯಕರು ಗರಂ ಆಗಿದ್ದಾರೆ.

ಅಂದು ಪ್ರತಿಭಟನೆ ಮುಗಿದ ಬಳಿಕ ಉಡುಪಿ ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮತ್ತು ವೃತ್ತ ನಿರೀಕ್ಷರ ಅದೇಶದ ಮೇರೆಗೆ ಹಲವರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಸುಮಾರು 12 ಗಂಟೆ ರಾತ್ರಿಯ ತನಕ ಕಾಯಿಸಿ ಕೇಸು ದಾಖಲಿಸಿದ್ದಾರೆ. ಅಲ್ಲದೇ ಈ ಪ್ರತಿಭಟನಾ ಸಭೆಗೆ ಅತಿಥಿಗಳಾಗಿ ಭಾಗವಹಿಸಿದ ಅತಿಥಿಗಳ ಮೇಲೆ ಹಾಗೂ ಮಹಿಳಾ ಅತಿಥಿಗಳ ಮೇಲೂ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಕ್ರಮಕ್ಕೆ ಅಗಮಿಸಿದ ವಾಹನಗಳನ್ನು ವಶಪಶಪಡಿಸಿಕೊಂಡು ದಂಡವಿಧಿಸುವ ಮೂಲಕ ತಾರತಮ್ಯ ನೀತಿ ಅನುಸರಿಸಿದ್ದಾರೆ. ಈ ಮೊದಲು ಕೊವೀಡ್ ಸಂದರ್ಭದಲ್ಲೇ ಧಾರ್ಮಿಕ ಹಾಗೂ ಕೆಲವು ಸಂಘಟನೆಗಳ ಕಾರ್ಯಕ್ರಮಗಳು ನಡೆದಿದ್ದವು. ಆ ಸಂದರ್ಭದಲ್ಲಿ ಯಾವುದೇ ಕೇಸು ದಾಖಲಿಸದ ಪೋಲಿಸ್ ಇಲಾಖೆ ಈಗ 35 ಕ್ಕೂ ಅಧಿಕ ಮಂದಿಯ ಮೇಲೆ ಸೆಕ್ಷನ್ 107, 109 ಮತ್ತು 112 ನ ಕೇಸು ಹಾಕಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ.ಈ ಸಂಬಂಧ ಉಡುಪಿ ಪೊಲೀಸರ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಎಸ್ಟಿಪಿಐ ರಾಜ್ಯ ಮುಖಂಡ ಭಾಸ್ಕರ್ ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.

Edited By : Nagesh Gaonkar
Kshetra Samachara

Kshetra Samachara

21/09/2021 05:35 pm

Cinque Terre

8.95 K

Cinque Terre

2