ಮಂಗಳೂರು:ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ ಹಿನ್ನೆಲೆಯಲ್ಲಿ
ಮಂಗಳೂರಲ್ಲಿ ವಾಸವಿರುವ ಅಫ್ಘಾನಿಗರಿಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತನ್ನ ಕಚೇರಿ ಸಭಾಂಗಣಕ್ಕೆ ಅವ್ರನ್ನು ಕರೆದು ಧೈರ್ಯ ತುಂಬಿದ್ದಾರೆ.
ಮಂಗಳೂರು ವಿವಿ ಮತ್ತು NITKಯಲ್ಲಿನ ಸುಮಾರು 58 ಮಂದಿ ವಿದ್ಯಾರ್ಥಿಗಳು ಮತ್ತು ಹಲವು ಪ್ರಜೆಗಳು ಮಂಗಳೂರಲ್ಲಿದ್ದಾರೆ. ಈ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್, ಮಂಗಳೂರು ವಿಶ್ವವಿದ್ಯಾಲಯ ಮತ್ತು NITK ಯಲ್ಲಿನ ಆಫ್ಘಾನಿಸ್ತಾನ ಮೂಲದ 58 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇವರಲ್ಲದೇ ಹಲವು ಪ್ರಜೆಗಳು ವಾಸವಾಗಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸದ ಹಿನ್ನಲೆಯಲ್ಲಿ ಆಫ್ಘಾನಿಸ್ತಾನ ವಿದ್ಯಾರ್ಥಿ ಸಂಘ ಮನವಿ ಸಲ್ಲಿತ್ತು. ಈ ಹಿನ್ನಲೆಯಲ್ಲಿ ಮಂಗಳೂರು ಕಮಿಷನರ್ ಕಚೇರಿಗೆ ಅವ್ರನ್ನು ಕರೆದು ಧೈರ್ಯ ತಂಬಿದ್ದೇವೆ. 58 ವಿದ್ಯಾರ್ಥಿಗಳಲ್ಲಿ 11 ಅಫ್ಘಾನಿಸ್ತಾನಕ್ಕೆ ವಿದ್ಯಾರ್ಥಿಗಳು ವಾಪಸ್ ತೆರಳಿದ್ದು ಉಳಿದ 47 ಮಂದಿಯ ಪೈಕಿ ಕೆಲವು ಮಂದಿ ತಮ್ಮ ಕುಟುಂಬ ಸದಸ್ಯರೊಂದಿಗೆ ಇಲ್ಲೇ ಉಳಿದುಕೊಂಡಿದ್ದಾರೆ. ಅವರು ನಮಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಅವರಿಗೆ ದೈರ್ಯ ತುಂಬುವ ಕೆಲಸ ಮಾಡಲಿದೆ ಎಂದರು.
Kshetra Samachara
21/08/2021 03:38 pm