ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:ಕಿನ್ನಿಗೋಳಿ ಪಟ್ಟಣ ಟ್ರಾಫಿಕ್ ಸಮಸ್ಯೆ ಅವ್ಯವಸ್ಥೆ,ಸಭೆಯಲ್ಲಿ ನಾಗರಿಕರಿಂದ ದೂರುಗಳ ಸುರಿಮಳೆ

ಮುಲ್ಕಿ: ಕಿನ್ನಿಗೋಳಿ ಪಟ್ಟಣ ಪಂಚಾಯತಿಯ ಕಿನ್ನಿಗೋಳಿ ಪೇಟೆಯಲ್ಲಿ ಟ್ರಾಫಿಕ್ ಸಮಸ್ಯೆಯ ಬಗ್ಗೆ ಟ್ರಾಫಿಕ್ ಪೊಲೀಸ್,ಮೆಸ್ಕಾಂ,ಲೋಕೊಪಯೋಗಿ ಇಲಾಖೆ,ರಿಕ್ಷಾ,ಟ್ಯಾಕ್ಸಿ ಮತ್ತು ಬಸ್ಸು ಮಾಲಕರ ಮತ್ತು ಚಾಲಕರ ಸಂಘದ ಸಭೆ ನಡೆಯಿತು.

ಸಭೆಯಲ್ಲಿ ನಾಗರಿಕರು ಕಿನ್ನಿಗೋಳಿಯ ಅನೇಕ ಅವ್ಯವಸ್ಥೆಗಳ ಬಗ್ಗೆ ನಾಗರಿಕರಿಂದ ದೂರುಗಳ ಸುರಿಮಳೆ ವ್ಯಕ್ತವಾಯಿತು

ಸಭೆಯಲ್ಲಿ ಕಿನ್ನಿಗೋಳಿ-ಮೂಡುಬಿದಿರೆ ರಾಜ್ಯ ಹೆದ್ದಾರಿ ರಸ್ತೆ ಬದಿಯನ್ನು ಅಗಲಗೊಳಿಸಿ,ಬಸ್ಸು ನಿಲ್ದಾಣದಲ್ಲಿ ಈಗಿರುವ ದ್ವಿ ಚಕ್ರ,ನಾಲ್ಕು ಚಕ್ರ ವಾಹನವನ್ನು ಸ್ಥಳಾಂತರಿಸುವುದು,ಮಾರುಕಟ್ಟೆ ಹೊರಗಡೆ ಮೀನು ಮಾರಾಟ ನಿಷೇಧಿಸುವುದು,ಸುಖಾನಂದ ಸರ್ಕಲ್ ಮೆನ್ನಬೆಟ್ಟು ರಸ್ತೆ ಬದಿ ಅತಿಕ್ರಮಣ ತೆರವುಗೊಳಿಸಿ ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸುವುದು.ವಾರದ ಸಂತೆಯನ್ನು ವಿಶಾಲ ಮೈದಾನ ಲಭ್ಯವಾದರೆ ಸ್ಥಳಾಂತರಿಸುವುದು,ಬಸ್ಸುಗಳು ರಸ್ತೆ ಬದಿಯಲ್ಲಿ ನಿಯಮಿತವಾಗಿ ನಿಲ್ಲಿಸಿ ಜನರನ್ನು ಹತ್ತಿಸಿಕೊಂಡು ಸಾಗಬೇಕೆಂದು ಎಂಬ ದೂರುಗಳು ಕೇಳಿ ಬಂತು

ಬಸ್ ನಿಲ್ದಾಣದಲ್ಲಿ ವಾಹನಗಳನ್ನು ಪುಟ್ ಪಾತ್ ಮೇಲೆ ಪಾರ್ಕಿಂಗ್ ಮಾಡುವುದರಿಂದ ಸಾರ್ವಜನಿಕರಿಗೆ ನಡೆದಾಡಲು ತೊಂದರೆ ಉಂಟಾಗುತ್ತದೆ ಎಂದು ಗಂಗಾಧರ ಎಳತ್ತೂರು ಸಭೆಯ ಗಮನ ಸೆಳೆದರು.

ಜನರು ಖಾಸಗಿ ವಾಹನದಲ್ಲಿ ಬಂದು ವಾಹನಗಳನ್ನು ಬಸ್ ನಿಲ್ದಾಣದಲ್ಲಿ ನಿಲ್ಲಿಸುವುದರಿಂದ ರಿಕ್ಷಾ ಪಾರ್ಕಿನವರಿಗೆ ತೊಂದರೆ ಉಂಟಾಗುತ್ತದೆ ಎಂದು ರಿಕ್ಷಾ ಚಾಲಕ ಶಶಿಕಾಂತ ಎಳತ್ತೂರು ದೂರಿದರು.

ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಪಟ್ಟಣ ಪಂಚಾಯತಿಯ ವ್ಯಾಪ್ತಿಯ ಕಿನ್ನಿಗೋಳಿ ಪೇಟೆಯಲ್ಲಿ ಸುವ್ಯವಸ್ಥಿತವಾಗಿ ವಾಹನ ಸಂಚಾರಕ್ಕೆ ಅವಕಾಶ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಸೂಕ್ತ ಅವಕಾಶವನ್ನು ಮುಂದಿನ ದಿನಗಳಲ್ಲಿ ಪೋಲಿಸ್ ಇಲಾಖೆ,ಲೋಕೋಪಯೋಗಿ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಯ ಜೊತೆ ಕಿನ್ನಿಗೋಳ್ನಿ ಪಟ್ಟಣ ಪಂಚಾಯತಿ ಅಕಾರಿಗಳು ಸಮನ್ವಯ ಸಾಧಿಸಿ ಕಾರ್ಯಗತಗೊಳಿಸಬೇಕೆಂದು ಹೇಳಿದರು.

ಮೂಲ್ಕಿಯ ತಹಶಿಲ್ದಾರ್ ಕಮಲಮ್ಮ,ಮಂಗಳೂರು ಉತ್ತರ ಸಂಚಾರಿ ಪೊಲೀಸ್ ಠಾಣಾ ಪೋಲಿಸ್ ನಿರೀಕ್ಷಕ ಮಹಮ್ಮದ್ ಶರೀಫ಼್,ಲೋಕೋಪಯೋಗಿ ಇಲಾಖಾ ಸಹಾಯಕ ಅಭಿಯಂತರರಾದ ಗೋಪಾಲ್,ಮೆಸ್ಕಾಂ ಶಾಖಾಕಾರಿಗಳು,ಹಾಗು ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕಿನ್ನಿಗೋಳಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸಾಯೀಶ್ ಚೌಟ ಸ್ವಾಗತಿಸಿ,ನಿರೂಪಿಸಿದರು.

Edited By : Nagesh Gaonkar
Kshetra Samachara

Kshetra Samachara

03/08/2021 10:50 pm

Cinque Terre

42.44 K

Cinque Terre

0