ಕುಂದಾಪುರ: ಗ್ರಾಮ ಕರಣಿಕರ ಕಛೇರಿಗೆ ಉಡುಪಿ ಡಿಸಿ ಜಿ.ಜಗದೀಶ್ ದಿಢೀರ್ ಭೇಟಿ ನೀಡಿದ ಪ್ರಸಂಗ ಇವತ್ತು ನಡೆಯಿತು.
ಕುಂದಾಪುರ ತಾಲೂಕು ವ್ಯಾಪ್ತಿಯ ತೆಕ್ಕಟ್ಟೆ ಗ್ರಾಮ ಕರಣಿಕರ ಕಛೇರಿಗೆ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಧಿಕಾರಿಗಳ ಕಾರ್ಯವೈಖರಿಗಳ ಪರಿಶೀಲನೆ ನಡೆಸಿದರು.ಬಳಿಕ ತೆಕ್ಕಟ್ಟೆ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಕೆಲಹೊತ್ತು ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಆಶ್ರಯ ಯೋಜನೆಗೆ ಅರ್ಜಿ ಸಲ್ಲಿಸಲ ಬಂದಿದ್ದ ವೃದ್ದೆ ಬಾಬಿ ಎಂಬವರು ಡಿ.ಸಿ ಜೊತೆ ತಮ್ಮ ಅಹವಾಲು ಹೇಳಿಕೊಂಡರು.
ಆಲುಗುಡ್ಡೆಯ ನಿವಾಸಿ ಬಾಬಿ(60) ಅವರ ಸಮಸ್ಯೆ ಆಲಿಸಿದ ಜಿ.ಜಗದೀಶ್ ಮಾನವೀಯ ನೆಲೆಯಲ್ಲಿ ಅವರ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.
Kshetra Samachara
30/07/2021 06:24 pm