ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ದುರ್ಗಾ ದೌಡ್‌ನಲ್ಲಿ ತಲವಾರು ಪ್ರದರ್ಶನ-ಪ್ರಚೋದನಕಾರಿ ಭಾಷಣ: ದಾಖಲಾಯ್ತು ಪ್ರಕರಣ

ಉಡುಪಿ: ಉಡುಪಿಯಲ್ಲಿ ಅ.2ರಂದು ನಡೆದಿದ್ದ ದುರ್ಗಾ ದೌಡ್ ಮೆರವಣಿಗೆಯಲ್ಲಿ ತಲವಾರು ಪ್ರದರ್ಶನ ಮತ್ತು ಪ್ರಚೋದನಕಾರಿ ಭಾಷಣದ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಅ.2ರಂದು ಮಧ್ಯಾಹ್ನ 3.30ಕ್ಕೆ ಕಡಿಯಾಳಿಯಿಂದ ಹೊರಟು ಉಡುಪಿ ನಗರದಲ್ಲಿ ಸಾಗಿದ ದುರ್ಗಾ ದೌಡ್ ಮೆರವಣಿಗೆಯಲ್ಲಿ ಸುಮಾರು 10-15 ಮಂದಿಯ ಗುಂಪು ಅಕ್ರಮವಾಗಿ ಮಾರಕಾಸ್ತ್ರವಾದ ತಲವಾರು ಪ್ರದರ್ಶಿಸಿದ್ದು ,ಭಯ ಹುಟ್ಟಿಸುವ ದುಷ್ಕೃತ್ಯ ಎಸಗಲಾಗಿದೆ ಎಂದು ಹುಸೈನ್ ಎಂಬವರು ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಐಎಫ್‌ಸಿ 1860(3/143, 149), 1959(/ ಎಸ್-27) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಪ್ರಚೋದನಕಾರಿ ಭಾಷಣ ಮಾಡಿದ್ದ ಶ್ರೀಕಾಂತ್ ಶೆಟ್ಟಿ ಹಾಗೂ ಕಾಜಲ್ ಹಿಂದೂಸ್ಥಾನಿ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

13/10/2022 06:44 pm

Cinque Terre

53.66 K

Cinque Terre

8