ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರದೊಂದಿಗೆ ನಾಗರಿಕರ ಕೈ ಸೇರುತ್ತಿದೆ 'ಎಚ್ಚರಿಕೆಯ ಕರಪತ್ರ'

ಪುತ್ತೂರು: ಎಲ್ಲೆಡೆಯೂ ಗಣೇಶೋತ್ಸವದ ಸಂಭ್ರಮ ಕಳೆಗಟ್ಟುತ್ತಿದ್ದರೆ ದ.ಕ.ಜಿಲ್ಲೆಯ ಪುತ್ತೂರಿನಲ್ಲಿ ಗಣೇಶೋತ್ಸವಕ್ಕೆ ಧರ್ಮದಂಗಲ್ ನ ಕರಿನೆರಳು ಛಾಯೆ ಬೀರಿದೆ. ಇಲ್ಲಿನ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯೊಂದಿಗೆ ಪುತ್ತೂರು ಜಿಲ್ಲೆ ಹಿಂದೂ ಸುರಕ್ಷಾ ಸಮಿತಿ ಹೆಸರಿನಲ್ಲಿ ಕರಪತ್ರವೂ ನಾಗರಿಕರ ಕೈ ಸೇರುತ್ತಿದೆ.

ಈ ಕರಪತ್ರದಲ್ಲಿ ಶಿವಮೊಗ್ಗದ ಹರ್ಷ, ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಹತ್ಯೆಯನ್ನು ಉಲ್ಲೇಖಿಸಿ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಷಡ್ಯಂತ್ರದ ಪೂರ್ವಭಾವಿ ಯಾಗಿ ಹಿಂದೂ ಯುವಕರನ್ನು ಕೊಲೆ ಮಾಡಲಾಗುತ್ತಿದೆ. ಆದ್ದರಿಂದ ಅನ್ಯಧರ್ಮೀಯರಿಗೆ ವ್ಯಾಪಾರ ನಿಷೇಧಿಸಬೇಕು. ಮಕ್ಕಳನ್ನು ಆಗಾಗ ದೇವಸ್ಥಾನಗಳಿಗೆ ಕರೆದೊಯ್ಯೋಣ. ಅವರಿಗೆ ಹಿಂದೂ ಆಚಾರ-ವಿಚಾರಗಳ ಬಗ್ಗೆ ಸಂಸ್ಕಾರ ನೀಡೋಣ ಎಂದು ಉಲ್ಲೇಖಿಸಲಾಗಿದೆ.

ಅಲ್ಲದೆ ಹಿಂದೂಗಳು ಬಟ್ಟೆ, ಚಪ್ಪಲಿ, ಇಲೆಕ್ಟ್ರಾನಿಕ್ ವಸ್ತುಗಳು, ತರಕಾರಿ, ಮೀನು, ಮಾಂಸ ದಿನಸಿ ವಸ್ತುಗಳನ್ನು ಹಿಂದೂಗಳಿಂದಲೇ ಖರೀದಿಸಿ. ಅಡಕೆ, ತೆಂಗು, ಬಾಳೆ ಇತ್ಯಾದಿ ಕೃಷಿ ಉತ್ಪನ್ನಗಳು, ಭೂಮಿ ಮಾರಾಟ ಅಥವಾ ಲೀಸ್‌ಗೆ ನೀಡುವುದಿದ್ದಲ್ಲಿ ಹಿಂದೂಗಳಿಗೇ ನೀಡೋಣ. ಜಾತಿ ಬೇಧ ಮರೆತು ಹಿಂದೂಗಳು ನಾವೆಲ್ಲಾ ಬಂಧು ಭಾವ ಮೆರೆಯೋಣ. ಗ್ರಾಮದಲ್ಲಿ ಅನ್ಯ ಮತೀಯ ಶಕ್ತಿಗಳ ಅನೈತಿಕ ಕೃತ್ಯವನ್ನು ತಡೆಯೋಣ‌ ಎಂದು ಉಲ್ಲೇಖಿಸಲಾಗಿದೆ. ಇದಕ್ಕೆ ಅಖಿಲ ಭಾರತ ಹಿಂದೂ ಮಹಾಸಭಾವೂ ಬೆಂಬಲ‌ ನೀಡಿದೆ. ಈ ಕರಪತ್ರದಲ್ಲಿ ಯಾವುದೇ ತಪ್ಪುಗಳಿಲ್ಲ. ಇಲ್ಲಿ ಯಾವುದೇ ಒತ್ತಡವನ್ನು ತಂದಿಲ್ಲ. ಅನ್ಯಧರ್ಮದವರ ಬಳಿ ಖರಿದೀಸಬೇಡಿ ಎಂದು ಮಾತ್ರ ಹೇಳಲಾಗಿದೆ. ಇದು ವಿವಾದವೆಂದಲ್ಲಿ ದೇಶ ಧರ್ಮಾಧಾರಿತವಾಗಿ ವಿಭಜನೆಯಾದಾಗ ಅವರು ಇಲ್ಲಿ ಇರೋದೇ ವಿವಾದ. ಹಿಂದೂಗಳು ಜಾಗೃತರಾಗಿದ್ದಾರೆ. ಹೀಗಾಗಿ ಕರಪತ್ರ ಹಂಚಿದ್ದಾರೆ ಎಂದು ಅಖಿಲ‌ಭಾರತ ಹಿಂದೂ ಮಹಾಸಭಾದ ಜಿಲ್ಲಾಧ್ಯಕ್ಷ ಧರ್ಮೇಂದ್ರ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

30/08/2022 03:48 pm

Cinque Terre

13.91 K

Cinque Terre

5