ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರೆ: ಕಂಚಿನಡ್ಕದಲ್ಲಿ ಗುಳಿಗನ‌ ಕಟ್ಟೆ ನಿರ್ಮಾಣ: ರಾತ್ರಿಯೇ ತೆರವುಗೊಳಿಸಿದ ಪೊಲೀಸರು!

ಪಡುಬಿದ್ರಿ: ಪಡುಬಿದ್ರಿ ಸಮೀಪದ ಕಂಚಿನಡ್ಕ ದೇವಸ್ಥಾನದಲ್ಲಿ ಗುಳಿಗನ ಕಟ್ಟೆ ನಿರ್ಮಾಣ ಮತ್ತು ತೆರವಿಗೆ ಸಂಬಂಧಪಟ್ಟು ನಿನ್ನೆ ರಾತ್ರಿ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು.

ರಾತ್ರಿ ವೇಳೆ ಏಕಾಏಕಿ ಗುಳಿಗನ ಕಟ್ಟೆಯನ್ನು ಸ್ಥಾಪಿಸಲಾಗಿದ್ದು ಇದನ್ನು ಸ್ಥಳೀಯರು ವಿರೋಧಿಸಿದ್ದಾರೆ. ಅದನ್ನು ತೆರವು ಮಾಡುತ್ತೇವೆ ಎಂದು ಹಿಂದೂ ಸಂಘಟನೆಗಳು ಹೇಳಿದರೆ ಹೊಸದಾಗಿ ಕಟ್ಟೆಯ ನಿರ್ಮಾಣ ಏಕೆ ಎಂದು ಮುಸ್ಲಿಂ ಪರ ಸಂಘಟನೆಗಳ ವಾದ.ಈ ವೇಳೆ ಎರಡೂ ಕಡೆಯ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದ್ದಾರೆ.

ಗುಳಿಗನ ಕಟ್ಟೆಗೆ ಸಂಬಂಧಿಸಿ ಎರಡು ಮುಸ್ಲಿಂ ಕುಟುಂಬಗಳು ಇತ್ತೀಚೆಗೆ ಪಡುಬಿದ್ರಿ ಗ್ರಾ. ಪಂ.ಗೆ ಸಲ್ಲಿಸಿದ್ದ ವಿರೋಧದ ಅರ್ಜಿಯನ್ನು ಬೇಷರತ್‌ ಹಿಂಪಡೆದಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ರಸ್ತೆಯಲ್ಲೇ ರವಿವಾರ ತಗಡು ಚಪ್ಪರವನ್ನು ನಿರ್ಮಿಸಲಾಗಿತ್ತು. ಕತ್ತಲ ವೇಳೆ ಗುಳಿಗನ ಕಟ್ಟೆಯನ್ನೂ ಕಟ್ಟಲಾಗಿದ್ದು ಇದು ಮತ್ತೆ ವಿವಾದಕ್ಕೆ ಕಾರಣವಾಯಿತು.ರಾತ್ರಿ ವೇಳೆ ಪೊಲೀಸರು ಆಗಮಿಸಿ ವಿವಾದಿತ ಕಟ್ಟೆಯನ್ನು ತೆರವುಗೊಳಿಸಿದ್ದಾರೆ.

Edited By :
Kshetra Samachara

Kshetra Samachara

13/06/2022 09:58 am

Cinque Terre

9.8 K

Cinque Terre

0