ಶಿರ್ವ: ಶಿರ್ವ ಪೊಲೀಸರು ರೋಟರಿ ಕ್ಲಬ್ ಸಹಯೋಗದೊಂದಿಗೆ ಇಂದು ಸಂಜೆ ವಿಶಿಷ್ಟ ಜಾಗೃತಿ ಕಾರ್ಯಕ್ರಮದ ಮೂಲಕ ಗಮನ ಸೆಳೆದಿದ್ದಾರೆ. ಸಂಜೆ ವೇಳೆ ಹೆಲ್ಮೆಟ್ ಹಾಕದೆ ಬಂದ ಸವಾರರನ್ನು ಯಮಧರ್ಮರಾಯ ಮತ್ತು ಚಿತ್ರ ಗುಪ್ತ ಎಚ್ಚರಿಸಿ ಕಳಿಸುವ ಕಾರ್ಯಕ್ರಮ ಇದು.ಹೌದು ,ಶಂಕರಪುರ ಜಂಕ್ಷನ್ ನಲ್ಲಿ ಶಿರ್ವ ಠಾಣೆ ಪೊಲೀಸರು ವಾಹನ ಸವಾರರಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಏರ್ಪಡಿಸಿದ್ದರು.ಹೆಲ್ಮೆಟ್ ಹಾಕದೇ ಸವಾರಿ ಮಾಡುತ್ತಿದ್ದ ದ್ವಿಚಕ್ರ ಸವಾರರನ್ನು ತಡೆದ ಯಮ ಮತ್ತು ಚಿತ್ರಗುಪತ್ರ ವೇಷಧಾರಿಗಳು ," ಯಾಕೆ ಹೆಲ್ಮೆಟ್ ಹಾಕಿಲ್ಲ? ಯಮಲೋಕಕ್ಕೆ ಹೋಗೋಣವೇ ? ಹೆಲ್ಮೆಟ್ ಹಾಕದೇ ಸಂಚಾರ ಮಾಡಿ ಅಪತ್ತು ತಂದುಕೊಳ್ಳಬೇಡಿ.ಇದೊಂದು ಬಾರಿ ಬಿಟ್ಡು ಕಳಿಸುತ್ತೇವೆ ,ಇದು ಕೊನೆಯ ಎಚ್ಚರಿಕೆ" ಎಂದು ಎಚ್ಚರಿಕೆ ನೀಡಿ ಕಳಿಸಿದರು.ಪೊಲೀಸರು ,ಹೂವು ನೀಡಿ ,ಈಗಲೇ ಹೆಲ್ಮೆಟ್ ಖರೀದಿ ಮಾಡಿ ಹಾಕಿಕೊಳ್ಳಬೇಕು ಎಂದು ಹೇಳಿ ಜಾಗೃತಿ ಮೂಡಿಸಿದರು.
Kshetra Samachara
22/12/2021 10:05 pm