ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಮುಂದುವರೆದ ಮಳೆ: ಇಂದು ರೆಡ್ ,ನಾಳೆ ಆರೆಂಜ್ ಅಲರ್ಟ್

ಉಡುಪಿ: ಜಿಲ್ಲೆಯಾದ್ಯಂತ ನಿನ್ನೆಯಿಂದ ಸತತ ಮಳೆಯಾಗುತ್ತಿದ್ದು ಇಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಶುಕ್ರವಾರ ಉಡುಪಿ, ಕಾರ್ಕಳ, ಬೈಂದೂರು, ಕುಂದಾಪುರ ಭಾಗದಲ್ಲಿ ಹೆಚ್ಚು ಮಳೆಯಾಗಿದೆ.

ಬ್ರಹ್ಮಾವರ, ಉಡುಪಿ ನಗರ ಸುತ್ತಮುತ್ತ, ಮಲ್ಪೆ, ಮಣಿಪಾಲ, ಪೆರ್ಡೂರು, ಹಿರಿಯಡಕ, ಕಾಪು, ಪಡುಬಿದ್ರಿ, ಅಜೆಕಾರು, ಹೆಬ್ರಿ ಭಾಗದಲ್ಲಿ ನಿರಂತರ ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೆರೆ ಆವರಿಸಿದೆ. ಉಡುಪಿ ನಗರದ ಮುಖ್ಯ ರಸ್ತೆಗಳಲ್ಲಿ ಮಳೆ ನೀರು ಹರಿಯುವ ಚರಂಡಿಗಳು ತುಂಬಿ ಹರಿಯುತ್ತಿದ್ದು, ರಸ್ತೆ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.

ಕರಾವಳಿಯಲ್ಲಿ ಮಳೆ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆ ಇದ್ದು, ಇಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಆ. 7 ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಮಳೆ, ಗಾಳಿ, ಸಮುದ್ರದ ಅಬ್ಬರ ಹೆಚ್ಚಿರುವ ನಿರೀಕ್ಷೆ ಇದೆ.

Edited By :
Kshetra Samachara

Kshetra Samachara

06/08/2022 11:03 am

Cinque Terre

11.82 K

Cinque Terre

0