ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಜಾತಿ ಪ್ರಮಾಣ ಪತ್ರ ಪಡೆಯುವ ವಿಚಾರ: ಏಕಮುಖ ಅಧ್ಯಯನ ಸಮಿತಿ ರಚನೆಗೆ ಮೊಗೇರ ಸಂಘದ ಖಂಡನೆ

ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ಪ್ರವರ್ಗ - 1ರಡಿ ಬರುವ ಮೀನುಗಾರ ಮೊಗೇರರು ಪರಿಶಿಷ್ಟ ಜಾತಿಯ ಮೊಗೇರರ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆಯಲು ಸರಕಾರಕ್ಕೆ ಪ್ರತಿಭಟನೆಯ ಮೂಲಕ ಒತ್ತಡ ಹೇರುತ್ತಿದೆ. ಈ ಒತ್ತಡಕ್ಕೆ ಮಣಿದು ರಾಜ್ಯ ಸರಕಾರ ಏಕಮುಖವಾಗಿ ಅಧ್ಯಯನ ಸಮಿತಿ ರಚಿಸಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ಮೊಗೇರ ಸಂಘ ಆಗ್ರಹಿಸಿದೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಂಗಳೂರು ಮೊಗೇರ ಸಂಘದ ಅಧ್ಯಕ್ಷ ಸುಂದರ ಮೇರ ಮಾತನಾಡಿ, 2010ರಲ್ಲಿ ರಾಜ್ಯ ಸರಕಾರವು ಉತ್ತರ ಕನ್ನಡ ಜಿಲ್ಲೆಯ ಮೊಗೇರ ಮೀನುಗಾರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸಿತ್ತು‌. ಆದರೆ ಇದೀಗ ರಾಜ್ಯ ಸರಕಾರವು ಹಿಂದಿನ ವರದಿಯನ್ನು ನಗಣ್ಯ ಮಾಡಿ ಏಕಮುಖವಾಗಿ ಉತ್ತರ ಕನ್ನಡ ಜಿಲ್ಲೆಯ ಸಮೀಕ್ಷೆ ನಡೆಸಿರುವುದು ಖಂಡನೀಯ. ತಕ್ಷಣ ಈ ವರದಿಯನ್ನು ರದ್ದುಪಡಿಸಿ ಯಥಾಸ್ಥಿತಿ ಕಾಪಾಡಬೇಕೆಂದು ಆಗ್ರಹಿಸಿದರು.

2005ರಲ್ಲಿ ಅಂದಿನ ರಾಜ್ಯ ಸರಕಾರವು ಸಮಿತಿಯನ್ನು ರಚಿಸಿತ್ತು. ಈ ಮೂಲಕ ಎಚ್.ಕೆ.ಭಟ್ ಅವರ ನೇತೃತ್ವದಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯ ಪ.ಜಾತಿ ಮೊಗೇರರು ಮತ್ತು ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರರ ಕುಲಕಸುಬು, ಕುಲದೇವರು, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿತ್ತು. ಈ ಮೂಲಕ ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರರನ್ನು ಪ್ರವರ್ಗ - 1ಕ್ಕೆ ಸೇರಿಸಲಾಗಿತ್ತು. ಈ ಮೂಲಕ ಅವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುವುದು ಸರಿಯಲ್ಲ ಎಂದು ವರದಿ ತಿಳಿಸಿತ್ತು. ಆದರೆ ಮತ್ತೆ ಮತ್ತೆ ಇದರ ಅಧ್ಯಯನ ನಡೆಸಿ ಕಾಲಹರಣ ಹಾಗೂ ದುಂದುವೆಚ್ಚ ಮಾಡುವುದರ ಹಿಂದೆ ಹುನ್ನಾರವಿದೆ‌. ಆದ್ದರಿಂದ 2010ರ ಅಧ್ಯಯನ ಸಮಿತಿಯ ವರದಿಯನ್ನೇ ಯಥಾಸ್ಥಿತಿ ಮುಂದುವರಿಸಬೇಕೆಂದು ಅವರು ಒತ್ತಾಯಿಸಿದರು.

Edited By : Shivu K
Kshetra Samachara

Kshetra Samachara

12/09/2022 02:35 pm

Cinque Terre

4.51 K

Cinque Terre

0

ಸಂಬಂಧಿತ ಸುದ್ದಿ