ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಹಿಂದೂ ಯುವಕರ ಸರಣಿ ಹತ್ಯೆ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಬೀಳಬೇಕು ಎಂದು ಕರ್ನಾಟಕ ಹಿಂದೂ ಜಾಗರಣ ವೇದಿಕೆಯ ಗೌರವಾಧ್ಯಕ್ಷ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಾಂದ ಸ್ವಾಮೀಜಿ ಹೇಳಿದ್ದಾರೆ. ನಗರದಲ್ಲಿ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು ಹಣಕಾಸಿನ ವಿಚಾರ , ವೈಯುಕ್ತಿಕ ದ್ವೇಷ ಹಾಗೂ ಗ್ಯಾಂಗ್ ವಾರ್ ಸಂಬಂಧಿಸಿ ನಿರಂತರವಾಗಿ ಕೊಲೆ, ಕೊಲೆಯತ್ನ,ಜೀವ ಬೆದರಿಕೆ ಅಹಿತಕರ ಘಟನೆಗಳು ನಡೆಯುತ್ತಿದ್ದು. ಇದು ತುಂಬಾ ನೋವಿನ ಸಂಗತಿ,ಮಾತುಕತೆ ,ಸಂಧಾನ ಮೂಲಕ ಇಂಥಹ ವಿವಾದ ಸರಿಪಡಿಸಲು ಸಾಧ್ಯ ಇದಕ್ಕೆ ಕೊಲೆ ಪರಿಹಾರವಲ್ಲ, ಕರಾವಳಿಯಲ್ಲಿ ಎಷ್ಟೋ ಹಿಂದೂ ಯುವಕರು ಅನೇಕ ಸಂದರ್ಭಗಳಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ. ಹೀಗಿರುವಾಗ ನಾನಾ ಕಾರಣದಿಂದಾಗಿ ದ್ವೇಷ ಸಾಧನೆಯೊಂದಿಗೆ ಪರಸ್ಪರ ಹೊಡೆದಾಡುವ ಬದಲು ನಮ್ಮ ಸಮಾಜವನ್ನು ಕಾಪಾಡುವ ಕರ್ತವ್ಯ ಎಲ್ಲಾರ ಮೇಲಿದೆ. ಮುಂದೆ ಇಂತಹ ಅಪರಾಧ ಕೃತ್ಯಗಳು ನಡೆಯದಂತೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು ಎಂದರು..
Kshetra Samachara
29/10/2020 10:50 am