ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಿಜಾಬ್ ಹಾಕಿ ತರಗತಿಗೆ ಹೋಗದಂತೆ ತಡೆದ ಶಿಕ್ಷಕರು

ಮಂಗಳೂರು: ಮಂಗಳೂರಿನ ವಾಮಂಜೂರು ಸೈಂಟ್ ರೇಮಂಡ್ಸ್ ಕಾಲೇಜಿನಲ್ಲಿ ಹಿಜಾಬ್ ವಿವಾದ ತಲೆದೋರಿದೆ. ಹಿಜಾಬ್ ಧರಿಸಿ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳಿಗೆ ಕಾಲೇಜ್ ಆಡಳಿತ ಪರೀಕ್ಷೆ ನಿರಾಕರಿಸಿದೆ. ತರಗತಿಗೆ ಹೋಗದಂತೆ ವಿದ್ಯಾರ್ಥಿಗಳನ್ನು ಶಿಕ್ಷಕರು ತಡೆದ ಘಟನೆ ಇಂದು ನಡೆದಿದೆ.

ಹೈಕೊರ್ಟ್ ಆದೇಶದಂತೆ ಹಿಜಾಬ್ ತೆಗೆದು ಪರೀಕ್ಷೆಗೆ ಹಾಜರಾಗುವಂತೆ ಕಾಲೇಜ್ ಅಡಳಿತ ಮಂಡಳಿ ಸೂಚಿಸಿದೆ. ಈ ಹಿಂದೆ ಎರಡು ಪರೀಕ್ಷೆ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಬರೆದಿದ್ದರು. ಆದರೆ ಇಂದು ಪರೀಕ್ಷೆ ಬರೆಯಲು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ವಿದ್ಯಾರ್ಥಿಗಳ ಟಿಸಿ ನೀಡುವಂತೆ ಪೋಷಕರು ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Edited By : Nagesh Gaonkar
PublicNext

PublicNext

21/03/2022 07:06 pm

Cinque Terre

56.86 K

Cinque Terre

37