ವರದಿ: ರಹೀಂ ಉಜಿರೆ
ಉಡುಪಿ: ಐದಾರು ದಿನಗಳಿಂದ ಉಡುಪಿಯಲ್ಲಿ ಹೆಣ್ಣುಮಕ್ಕಳ ಹಿಜಾಬ್ ಸದ್ದು ಮಾಡುತ್ತಿದೆ.ಇಲ್ಲಿನ ಸರಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದದ್ದು ವಿವಾದವಾಗುತ್ತಿದೆ.ಇದೀಗ ಈ ವಿಷಯವು ರಾಜಕೀಯ ಅಸ್ತ್ರವಾಗಿಯೂ ಮಾರ್ಪಾಟಾಗುತ್ತಿದೆ.
ವಾಯ್ಸ್ : ಶಿಕ್ಷಣ ಸರ್ವಧರ್ಮ ಸಮನ್ವಯತೆಯನ್ನು ಸಾರಬೇಕು.ಅಂತಹ ಶಿಕ್ಷಣ ಕೇಂದ್ರದಲ್ಲಿ ಧರ್ಮ ಬೆರೆತರೆ ಏನಾಗಿತ್ತದೋ ಅದೇ ಆಗುತ್ತಿದೆ.ಉಡುಪಿಯ ಸರಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದದ್ದಕ್ಕೆ ,ಕಾಲೇಜಿನ ಪ್ರಾಂಶುಪಾಲರು ವಿರೋಧ ವ್ಯಕ್ತಪಡಿಸಿದ್ದಾರೆ.ಬೆರಳೆಣಿಕೆಯ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಹಕ್ಕು ಬೇಕು ಎಂದು ಪ್ರತಿಪಾದಿಸತೊಡಗಿದ್ದಾರೆ.ಇದಾಗಿ ವಾರವಾಗುತ್ತಾ ಬಂದಿದ್ದರೂ ವಿವಾದ ತಣ್ಣಗಾಗಿಲ್ಲ.ಇದೀಗ ಕಾಲೇಜಿನ ಹಿಜಾಬ್ ವಿಷಯ ಪಿಯು ಬೋರ್ಡ್ ತಲುಪಿದೆ.ಸದ್ಯಕ್ಕೆ ಉಳಿದ ವಿದ್ಯಾರ್ಥಿನಿಯರಂತೆ ನೀವೂ ಪಾಠ ಕೇಳಿ.ಯಥಾಸ್ಥಿತಿ ಕಾಪಾಡಿ.ಮೇಲಿಂದ ಯಾವ ಆದೇಶ ಬರುತ್ತದೋ ಕಾದು ನೋಡೋಣ ಎಂದು ಪ್ರಾಂಶುಪಾಲರು ವಿದ್ಯಾರ್ಥಿನಿಯರು ಮತ್ತು ಪೋಷಕರಿಗೆ ತಿಳಿಸಿದ್ದಾರೆ.
ಹಿಜಾಬ್ ವಿಷಯವಾಗಿ ಈಗಾಗಲೇ ಶಾಸಕ ರಘುಪತಿ ಭಟ್ ಸಭೆ ನಡೆಸಿದ್ದಾರೆ. ಪೋಷಕರು ,ವಿದ್ಯಾರ್ಥಿನಿಯರು ಮತ್ತು ಕಾಲೇಜಿನ ಪ್ರಾಂಶುಪಾಲರ ಸಭೆ ನಡೆಸಿ ಇದು ವಿವಾದ ಆಗುವುದು ಬೇಡ.ಯಾರದ್ದೋ ಕುಮ್ಮಕ್ಕಿನಿಂದ ಹಿಜಾಬ್ ಘಟನೆಯನ್ನು ರಾಜಕೀಯಗೊಳಿಸಲಾಗುತ್ತಿದೆ. ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ 1985 ರಿಂದಲೂ ಸಮವಸ್ತ್ರ ಕಡ್ಡಾಯ ಇದೆ, ಹಿಜಾಬ್ ಗೆ ಒತ್ತಾಯ ಮಾಡುವವರು ಒಂದೂವರೆ ವರ್ಷ ಸಮವಸ್ತ್ರದಲ್ಲಿ ಬಂದಿದ್ದಾರೆ.ನಮ್ಮ ಜಿಲ್ಲೆಯಲ್ಲಿ ಸೌಹಾರ್ದಯುತ ವಾತಾವರಣ ಇದ್ದು ಆ ಸೌಹಾರ್ದಯುತ ವಾತಾವರಣ ಮುಂದುವರೆಯಲು ಬಿಡಿ ಎಂದು ಮನವಿ ಮಾಡಿದ್ದಾರೆ.
ಇದೀಗ ಈ ಘಟನೆಯ ಹಿಂದೆ ಸಂಘಟನೆಗಳೂ ಮೂಗು ತೂರಿಸಿದ್ದು ಸಮಸ್ಯೆ ಜಟಿಲಗೊಳ್ಳುವಂತೆ ಮಾಡಿದೆ.ವಿದ್ಯಾರ್ಥಿನಿಯರು ಕಾಲೇಜಿನ ತನಕ ಹಿಜಾಬ್ ಧರಿಸಿ ,ಕ್ಲಾಸ್ ರೂಮ್ ಒಳಗೆ ಮಾತ್ರ ಉಳಿದವರಂತೆ ಸಮವಸ್ತ್ರದಲ್ಲಿ ಪಾಠ ಕೇಳಲಿ ಎಂಬ ನಿರ್ಣಯ ಆಗಿದ್ದು ನ್ಯಾಯಯುತವಾಗಿಯೇ ಇದೆ.ಮುಂದೆ ಈ ಸ್ಕಾರ್ಫ್ ವಿವಾದ ಯಾವ ತಿರುವು ಪಡೆಯುತ್ತೋ ಕಾದು ನೋಡಬೇಕಿದೆ.
PublicNext
03/01/2022 08:19 pm