ಉಡುಪಿ: ಉಡುಪಿ ಸೇರಿದಂತೆ ನಾಳೆ ರಾಜ್ಯಾದ್ಯಂತ ಕಾಲೇಜುಗಳು ಆರಂಭವಾಗಲಿವೆ.ಹಿಜಾಬ್ ವಿವಾದ ಮೊದಲು ಪ್ರಾರಂಭವಾಗಿದ್ದು ಉಡುಪಿಯಲ್ಲಿ.
ಈ ಹಿನ್ನೆಲೆಯಲ್ಲಿ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ .ಈ ಕುರಿತು ಇವತ್ತು ಮಾತನಾಡಿದ ಉಡುಪಿ ಎಸ್ಪಿ ವಿಷ್ಣುವರ್ಧನ್, ಜಿಲ್ಲೆಯಲ್ಲಿ ಅಗತ್ಯ ಬಂದೋಬಸ್ತ್ ಮಾಡಿದ್ದೇವೆ. ಹಲವು ಠಾಣಾ ವ್ಯಾಪ್ತಿಗಳಲ್ಲಿ ಶಾಂತಿ ಸಭೆಗಳನ್ನು ನಡೆಸಿದ್ದೇವೆ.
ನಾಳೆ ಕಾಲೇಜು ಆವರಣಗಳಲ್ಲಿ ಮಹಿಳಾ ಪೊಲೀಸರನ್ನು ನಿಯೋಜನೆ ಮಾಡುತ್ತೇವೆ. ಜಿಲ್ಲೆಯಾದ್ಯಂತ ಭದ್ರತೆಗಾಗಿ 700ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
Kshetra Samachara
15/02/2022 09:39 pm