ಮಂಗಳೂರು: ಉಗ್ರರ ಪರವಾದ ಗೋಡೆ ಬರಹ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ನೀಡಲು ಒತ್ತಾಯಿಸಿ ಹಾಗೂ ಮಂಗಳೂರಿನಲ್ಲಿ ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ ಖಂಡಿಸಿ ವಿಎಚ್ ಪಿ ಕಾರ್ಯಕರ್ತರು ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಿದರು.
ಜಾಗತಿಕ ಮಟ್ಟದಲ್ಲಿ ಬೇರೂರಿದ ಭಯೋತ್ಪಾದನೆ ಚಟುವಟಿಕೆ ಕರಾವಳಿ ಜಿಲ್ಲೆಗಳಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿದ್ದು, ಈ ನಿಲುವು ಮಂಗಳೂರಿನಲ್ಲಿ ಉಗ್ರರ ಪರ ಗೋಡೆಬರಹಗಳ ಮುಖಾಂತರ ಕಂಡುಬರುತ್ತಿದೆ.
ಇದೊಂದು ಅತಂಕಕಾರಿ ಘಟನೆಯಾಗಿದ್ದು, ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಮೂವರನ್ನು ಬಂಧಿಸಲಾಗಿದೆ.
ಇದೊಂದು ಪ್ರಚೋದನಕಾರಿ ಬರಹವಾಗಿದ್ದು, ಜಿಲ್ಲೆಯಲ್ಲಿ ಜಿಹಾದಿ ಮಾನಸಿಕತೆ ಇರುವ ಯುವಕರನ್ನು ಭಯೋತ್ಪಾದನೆ ಕುಕೃತ್ಯಕ್ಕೆ ಬಳಸಲು ಉತ್ತೇಜಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಈ ನಿಟ್ಟಿನಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ NIA ತನಿಖೆಗೆ ಅದೇಶ ನೀಡಬೇಕೆಂದು ರಾಜ್ಯ ಸರಕಾರವನ್ನು ಒತ್ತಾಯಿಸಲಾಯಿತು.
ಈ ಸಂದರ್ಭ ನೂರಾರು ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಜಿಲ್ಲೆಯ ಪ್ರಮುಖ ಮುಖಂಡರು ಭಾಗವಹಿಸಿದ್ದರು.
Kshetra Samachara
23/12/2020 02:19 pm