ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಬ್ರಹ್ಮಣ್ಯ: ಹುಲ್ಲು ಕೊಯ್ಯುತ್ತಿದ್ದವರಿಗೆ ಅರಣ್ಯ ಇಲಾಖೆ ಅಧಿಕಾರಿ ದರ್ಪ; ಸ್ಥಳೀಯರ ಆಕ್ರೋಶ

ಸುಬ್ರಹ್ಮಣ್ಯ: ದನಕರುಗಳಿಗೆ ಹುಲ್ಲು ಕೊಯ್ಯುತ್ತಿದ್ದ ಮಹಿಳೆಯ ವಾಹನವನ್ನು ಅರಣ್ಯಾಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಕುರಿತು ಆಕ್ರೋಶ ವ್ಯಕ್ತವಾಗಿದ್ದು, ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ದೀಕ್ಷಿತಾ ಎಂಬವರು ಅರಣ್ಯ ಅಧಿಕಾರಿಯ ದರ್ಪ, ದುರ್ವರ್ತನೆ ಖಂಡಿಸಿದರು. ಮೂಜೂರು ಭಾಗದಲ್ಲಿ ದಿನನಿತ್ಯ ಅರಣ್ಯಾಧಿಕಾರಿಗಳ ಸಹಕಾರದಿಂದ ಅಕ್ರಮ ಮರ, ಮರಳು ಸಾಗಾಟ ನಡೆಯುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳದ ಈ ಭ್ರಷ್ಟ ಅಧಿಕಾರಿಗಳು, ದನಕರುಗಳಿಗೆ ಹುಲ್ಲು ಕೊಯ್ಯುತ್ತಿದ್ದ ಬಡ ಅಮಾಯಕರ ಮೇಲೆ ದರ್ಪ, ಕೋಪ ತೋರಿಸಿ, ಕ್ರಮ ಕೈಗೊಳ್ಳುವುದು ನ್ಯಾಯವೇ..? ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿ, ನ್ಯಾಯ ಕೊಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Edited By : Nagesh Gaonkar
Kshetra Samachara

Kshetra Samachara

03/12/2020 10:24 am

Cinque Terre

13.63 K

Cinque Terre

2

ಸಂಬಂಧಿತ ಸುದ್ದಿ