ಮಂಗಳೂರು : ಕೊರೊನಾ ಕಂಟಕದ ಮಧ್ಯೆ ರಾಜ್ಯದಲ್ಲಿ ಡ್ರಗ್ಸ್ ಕೇಸ್ ವಿಚಾರಣೆಯೂ ಸಾಕಷ್ಟು ಸಂಚಲನವನ್ನು ಸೃಷ್ಟಿಸಿತ್ತು.
ಈ ಕೇಸ್ ವಿಚಾರಣೆ ಮಾಡುತ್ತಿದ್ದ ಅಧಿಕಾರಿಗಳ ಎತ್ತಂಗಡಿ ಕಾರ್ಯವೂ ಚುರುಕಾಗಿತ್ತು. ಇದಕ್ಕೆ ಸಾಕ್ಷಿ ಮಂಗಳೂರು ಸಿಸಿಬಿಗೆ ಇನ್ಸ್ ಪೆಕ್ಟರ್ ಆಗಿ ಮತ್ತೆ ಮಹೇಶ್ ಪ್ರಸಾದ್ ಅವರನ್ನು ನೇಮಕ ಮಾಡಲಾಗಿದೆ.
ಇನ್ಸ್ ಪೆಕ್ಟರ್ ಶಿವಪ್ರಕಾಶ್. ಆರ್.ನಾಯಕ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಯ ಕಾಪು ಠಾಣೆಯಲ್ಲಿದ್ದ ಮಹೇಶ್ ಪ್ರಸಾದ್ ಗೆ ಸಿಸಿಬಿ ಹುದ್ದೆ ನೀಡಲಾಗಿದೆ.
ಮಂಗಳೂರು ಡ್ರಗ್ಸ್ ಕೇಸ್ ವಿಚಾರಣೆ ವೇಳೆಯೇ ಸಿಸಿಬಿಗೆ ಮಹೇಶ್ ಪ್ರಸಾದ್ ನೇಮಕವಾಗಿತ್ತು.
ಅನುಶ್ರೀ ವಿಚಾರಣೆ ನಡೆಸಿದ್ದ ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್. ಆರ್.ನಾಯಕ್ ವರ್ಗಾವಣೆ ಮಾಡಲಾಗಿತ್ತು.
ಆದರೆ ಭಾರೀ ವಿವಾದದ ಬೆನ್ನಲ್ಲೇ ಸರ್ಕಾರ ಅಂದು ವರ್ಗಾವಣೆ ರದ್ದು ಮಾಡಿತ್ತು.
ಇದೀಗ ಮತ್ತೆ ಮಂಗಳೂರು ಸಿಸಿಬಿಗೆ ಮಹೇಶ್ ಪ್ರಸಾದ್ ನೇಮಕ ಮಾಡಿದೆ.
Kshetra Samachara
17/11/2020 07:45 am