ಬಂಟ್ವಾಳ: ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಮನೆ ಮೇಲೆ ಗುಡ್ಡವೊಂದು ಏಕಾಏಕಿ ಜರಿದು ಬಿದ್ದ ದುರ್ಘಟನೆಯಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿದೆ.
ಕೇರಳದ ಪಾಲಕ್ಕಾಡ್ ನಿವಾಸಿ ಬಿಜು (45) ಬುಧವಾರ ರಾತ್ರಿಯೇ ಸಾವನ್ನಪ್ಪಿದರು. ತಡವಾಗಿ ರಕ್ಷಿಸಿದ ಅಲಪ್ಪುರದ ಸಂತೋಷ್ (46) ಮತ್ತು ಕೊಟ್ಟಾಯಂನ ಬಾಬು (46) ಅವರೂ ಮೃತಪಟ್ಟಿದ್ದಾರೆ. ಕಣ್ಣೂರಿನ ಜಾನಿ (44) ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಧಾರಾಕಾರ ಮಳೆಗೆ ಪಂಜಿಕಲ್ಲು ಗ್ರಾಮದ ಮುಕ್ಕುಡ ಎಂಬಲ್ಲಿ ಮನೆಯೊಂದರ ಮೇಲೆ ಗುಡ್ಡ ಜರಿದು ಅದರಡಿ ನಾಲ್ವರು ಕೇರಳ ಮೂಲದ ಕಾರ್ಮಿಕರು ಸಿಲುಕಿಕೊಂಡಿದ್ದರು. ತಡರಾತ್ರಿವರೆಗೂ ಸುಮಾರು ನಾಲ್ಕು ಗಂಟೆ ಸುರಿಯುವ ಮಳೆಯಲ್ಲಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳವು ರಕ್ಷಣಾ ಕಾರ್ಯ ನಡೆಸಿದರು. ದುರದೃಷ್ಟವಶಾತ್ ನಾಲ್ವರ ಪೈಕಿ ಓರ್ವ ಕಾರ್ಮಿಕ ಬದುಕುಳಿದಿದ್ದಾರೆ.
ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ, ಎಸ್‌ಪಿ ಋಷಿಕೇಶ್ ಸೋನಾವಣೆ, ಸಹಾಯಕ ಕಮಿಷನರ್ ಮದನ್ ಮೋಹನ್, ತಹಶೀಲ್ದಾರ್ ಡಾ. ಸ್ಮಿತಾ ರಾಮು ಅವರು ಸ್ಥಳಕ್ಕೆ ಭೇಟಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.
PublicNext
07/07/2022 10:48 am