ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರೈಲಿನಿಂದ ಬೀಳುತ್ತಿದ್ದ ವೃದ್ಧನ ರಕ್ಷಣೆ: ಸಣ್ಣಪುಟ್ಟ ಗಾಯಗಳೊಂದಿಗೆ ಬದುಕಿದ ಮುದುಕ

ಉಡುಪಿ: ರೈಲಿನಿಂದ ಪ್ಲಾಟ್ ಫಾರ್ಮ್ ಮೇಲೆ ಜಾರಿಬೀಳುತ್ತಿದ್ದ ಹಿರಿಯ ನಾಗರಿಕರೊಬ್ಬರನ್ನು ರೈಲ್ವೇ ರಕ್ಷಣಾ ದಳದ ಸಿಬಂದಿ ರಕ್ಷಿಸಿದ ಘಟನೆ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಬುಧವಾರ (ನಿನ್ನೆ) ಸಾಯಂಕಾಲ ನಡೆದಿದೆ.

ಪೆರ್ಡೂರು ನಿವಾಸಿ ಕುಟ್ಟಿ ಕುಂದರ್ (70) ಅವರು ಮುಂಬಯಿಗೆ ತೆರಳುತ್ತಿದ್ದ ಮಗಳ ಬ್ಯಾಗ್ಗಳನ್ನು ರೈಲಿನಲ್ಲಿರಿಸಿ ಇಳಿಯುತ್ತಿದ್ದಾಗ ರೈಲು ಸಂಚರಿಸಲು ಆರಂಭಿಸಿದ್ದು, ಅವರು ಆಯತಪ್ಪಿ ಬಿದ್ದಿದ್ದಾರೆ. ರೈಲಿನ ಹಿಡಿಕೆಯನ್ನು ಹಿಡಿದುಕೊಂಡಿದ್ದ ಕಾರಣ ಸುಮಾರು 30 ಮೀಟರ್ ದೂರದವರೆಗೆ ರೈಲು ಅವರನ್ನು ಎಳೆದುಕೊಂಡು ಹೋಗಿದೆ. ಇದನ್ನು ಗಮನಿಸಿದ ಕರ್ತವ್ಯನಿರತ ಸಿಬಂದಿ ಎಂ.ವಿ. ಸಜೀರ್ ಅವರು ಧಾವಿಸಿ ಕುಂದರ್ ಅವರನ್ನು ಹಿಡಿದು ಮೇಲಕ್ಕೆತ್ತುವ ಮೂಲಕ ಬಚಾವ್ ಮಾಡಿದ್ದಾರೆ.

ಕುಂದರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

Edited By :
PublicNext

PublicNext

26/05/2022 01:02 pm

Cinque Terre

41.34 K

Cinque Terre

6