ಮಂಗಳೂರು: ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಸುರತ್ಕಲ್ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ತೆರಳಿ ಕೊಪ್ಪರಿಗೆ ಪೂಜೆ ನೆರವೇರಿಸಿ ದೇವರ ಆಶೀರ್ವಾದ ಪಡೆದಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಮುಂಬೈನ ಹನಿ ಹಿಂದೂಸ್ತಾನಿ, ಮೊಯ್ದೀನ್ ಬಾವಾರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡು, ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಈ ಕರೆಯಲ್ಲಿ 'ನಿಮಗೆ ತಪ್ಪು ಅನ್ನಿಸಲ್ವಾ..? ನೀವು ಯಾಕೆ ಹೋದ್ರಿ..? ಇದು ನೆಹರೂ ದೇಶ ಅಲ್ಲ, ಇದು ಮೋದಿ ದೇಶ ಎಂದು ಮಾತನಾಡಿದ ಈ ಮುಂಬೈ ವ್ಯಕ್ತಿ, ಇನ್ಮುಂದೆ ನೀವು ದನದ ಮಾಂಸ ತಿಂದು ದೇವಸ್ಥಾನಕ್ಕೆ ಹೋದ್ರೆ ಜಾಗೃತೆ ಎಂದು ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಮಾಜಿ ಶಾಸಕರು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
Kshetra Samachara
21/10/2020 04:46 pm