ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಫಘಾನಿಸ್ತಾನದಿಂದ ಏರ್ ಲಿಫ್ಟ್ ಮೂಲಕ ಸುರಕ್ಷಿತವಾಗಿ ಊರಿಗೆ ಮರಳಿದ ಉಳ್ಳಾಲದ ವ್ಯಕ್ತಿ..

ಮಂಗಳೂರು: ಅಫಘಾನಿಸ್ತಾನದಿಂದ ಮಂಗಳೂರಿನ ‌ನಿವಾಸಿಯೊಬ್ರು ಸುರಕ್ಷಿತರಾಗಿ ಊರಿಗೆ ಮರಳಿದ್ದಾರೆ. ಹೌದು.‌ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮೇಲುಗೈ ಸಾಧಿಸುತ್ತಿದ್ದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ಭಾರತದಲ್ಲಿರುವವರನ್ನು ಏರ್‌ಲಿಫ್ಟ್ ಮಾಡಲಾಗುತ್ತಿದೆ. ಅದ್ರಲ್ಲಿ ಮಂಗಳೂರಿನ ಉಳ್ಳಾಲ ನಿವಾಸಿ ಮೆಲ್ವಿನ್‌ ಎಂಬುವವರು ಊರಿಗೆ ತಲುಪಿದ್ದಾರೆ. ಅಘ್ಘಾನ್‌ನಲ್ಲಿ ಸಿಲುಕಿಕೊಂಡ ಭಾರತೀಯರಲ್ಲಿ ಮಂಗಳೂರು ಮೂಲದ ಕೆಲವು ಮಂದಿ ವಿವಿಧ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ‌. ಅವರನ್ನು ಆಯಾಯ ಕಂಪೆನಿಗಳು ಸ್ಥಳಾಂತರ ಮಾಡುವ ಕಾರ್ಯ ನಡೆಸುತ್ತಿದೆ.

ಕಾಬೂಲ್‌ನಿಂದ ಭಾರತೀಯ ವಾಯುಸೇನೆ ಏರ್‌ಲಿಫ್ಟ್‌ ಮಾಡಿದವರಲ್ಲಿ ಉಳ್ಳಾಲ ಉಳಿಯ ನಿವಾಸಿ ಮೆಲ್ವಿನ್‌ ಕೂಡಾ ಒಬ್ಬರಾಗಿದ್ದು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಇವರು ಕಾಬೂಲ್‌ನ ನ್ಯಾಟೋ ಪಡೆಯ ಮಿಲಿಟರಿ ಬೇಸ್‌ ಕ್ಯಾಂಪ್‌ನ ಆಸ್ಪತ್ರೆಯಲ್ಲಿ ಇಲೆಕ್ಟ್ರಿಕಲ್‌ ಮೈಂಟೆನೆನ್ಸ್‌ ವಿಭಾಗದಲ್ಲಿ ಮೆಲ್ವಿನ್ ಕೆಲಸ ಮಾಡುತ್ತಿದ್ದರು.ಭಾರತೀಯ ರಾಯಭಾರಿ ಕಚೇರಿಯಲ್ಲಿದ್ದ ಸಿಬ್ಬಂದಿಗಳನ್ನು, ಸೆಕ್ಯುರಿಟಿ ತಂಡವನ್ನು ಕರೆತರಲು ತೆರಳಿದ್ದ ವಾಯಸೇನೆಯ ಸಿ 17 ವಿಮಾನದಲ್ಲಿ ಇವರ ಸಂಸ್ಥೆಯಲ್ಲಿ ಕೆಲಸ ಮಾಡುವ 7 ಜನರ ಸಹಿತ ಒಟ್ಟು 160 ಮಂದಿಯನ್ನು ಮಂಗಳವಾರ ಬೆಳಗ್ಗೆ 5 ಗಂಟೆಗೆ ಕಾಬೂಲ್‌ನಿಂದ ಗುಜರಾತ್‌ನ ಜಾಮ್‌ನಗರದಲ್ಲಿರುವ ವಾಯುಸೇನೆ ನೆಲೆಗೆ ಕರೆತಂದು ಅಲ್ಲಿಂದ ಹೊಸದೆಹಲಿ ಮೂಲಕ ಬೆಂಗಳೂರು ಮಾರ್ಗವಾಗಿ ಬುಧವಾರ ರಾತ್ರಿ ಇವರು

ಉಳ್ಳಾಲದ ಮನೆಗೆ ತಲುಪಿದ್ದಾರೆ.

Edited By : Manjunath H D
Kshetra Samachara

Kshetra Samachara

19/08/2021 03:45 pm

Cinque Terre

9.44 K

Cinque Terre

1