ಉಡುಪಿ: ಶನಿವಾರ ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಂಸಾಹಾರವನ್ನು ತಿಂದು ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಉಡುಪಿ ಶಾಸಕರು ಮತ್ತು ಬಿಜೆಪಿ ನಾಯಕರು ಕೂಡ ಗೋವಾ ಸಿಎಂ ಜೊತೆಗಿದ್ದರು. ಸಿದ್ದರಾಮಯ್ಯನವರು ಮಾಂಸಾಹಾರ ಉಂಡು ದೇವಸ್ಥಾನಕ್ಕೆ ಹೋದರು ಎಂದು ಬೆರಳು ತೋರಿಸುವ ಬಿಜೆಪಿಯವರ ದ್ವಂದ್ವ ನಿಲುವು ಇದರಿಂದ ಬಯಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಅವರು, ಆಹಾರ, ಬಟ್ಟೆ ಅವರವರ ಹಕ್ಕು. ಈ ವಿಚಾರದಲ್ಲಿ ನಮ್ಮ ಆಕ್ಷೇಪಗಳಿಲ್ಲ. ಆದರೆ ಬಿಜೆಪಿಯವರು ಕಾಂಗ್ರೆಸಿಗರ ಮೇಲೆ ಬೆರಳು ತೋರಿಸುವ ಕೆಲಸವನ್ನು ಸದಾ ಮಾಡುತ್ತಾರೆ. ಈಗ ಇವರು ಮಾಡಿರುವುದೇನು? ಇದಕ್ಕೆ ಬಿಜೆಪಿ ನಾಯಕರು ಉತ್ತರ ಕೊಡಬೇಕು ಎಂದು ರಮೇಶ್ ಕಾಂಚನ್ ಸವಾಲು ಹಾಕಿದ್ದಾರೆ.
PublicNext
10/10/2022 04:44 pm