ಮುಲ್ಕಿ: ನಗರ ಪಂಚಾಯತ್‌ನಿಂದ "ಸ್ಮಾರ್ಟ್ ಮುಲ್ಕಿ" ಎಂಬ ರ್ಶೀಕೆಯಡಿ ಯಾವುದೇ ಕಾಮಗಾರಿಯನ್ನು ಕೈಗೊಂಡಿರುವುದಿಲ್ಲ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಹೇಳಿದ್ದಾರೆ./
ಮುಲ್ಕಿಯಲ್ಲಿ ಇತ್ತೀಚೆಗೆ ನಡೆದ ಸೇವಾ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಕಾರ್ನಾಡು ಉದ್ಯಮಿ ಜೀವನ್ ಕೆ. ಶೆಟ್ಟಿ ರವರು ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ "ಸ್ಮಾರ್ಟ್ ಮುಲ್ಕಿ" ಎಂದು ಲೋಗೋ ಅನಾವರಣಗೊಳಿಸಿದ್ದರು.
ಈ ವಿಷಯ ಮಾಧ್ಯಮದಲ್ಲೂ ಪ್ರಕಟವಾಗಿತ್ತು. ಇತ್ತೀಚೆಗೆ ಮುಲ್ಕಿ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ನಗರಾಡಳಿತದ ಮಾಸಿಕ ಸಭೆಯಲ್ಲಿ ನಗರ ಪಂಚಾಯತ್ ಸದಸ್ಯ ಹರ್ಷರಾಜ ಶೆಟ್ಟಿ ಈ ಬಗ್ಗೆ ವಿಷಯ ಪ್ರಸ್ತಾಪಿಸಿ ಆಡಳಿತದ ಸ್ಪಷ್ಟನೆ ಬಯಸಿದ್ದರು.
ಈ ಬಗ್ಗೆ ನ.ಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿರವರು ಪರಿಶೀಲನೆ ನಡೆಸುವ ಭರವಸೆ ನೀಡಿದ್ದರು. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ ಚಂದ್ರ ಪೂಜಾರಿಯವರು ಸ್ಮಾರ್ಟ್ ಮುಲ್ಕಿ ಯಂತಹ ಯೋಜನೆಗಳು ಸರಕಾರದ ಅಥವಾ ನಗರ ಆಡಳಿತದ ಬಳಿ ಇಲ್ಲ, ಸ್ಮಾರ್ಟ್ ಮುಲ್ಕಿಗೂ ನಗರ ಆಡಳಿತಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಾಧ್ಯಮ ಹೇಳಿಕೆ ಮೂಲಕ ಸ್ಪಷ್ಟಪಡಿಸಿದ್ದಾರೆ.
Kshetra Samachara
01/10/2022 10:47 pm