ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಲೆವೂರು - ಉಡುಪಿ ರಸ್ತೆ ತುಂಬ ಹೊಂಡ ಗುಂಡಿಗಳದ್ದೇ ದರ್ಬಾರ್: ನಿತ್ಯವೂ ವಾಹನ ಸವಾರರ ಸರ್ಕಸ್

ಉಡುಪಿ : ಅಲೆವೂರು- ಉಡುಪಿ ರಸ್ತೆ ಪ್ರಯಾಣಿಕರಿಗೆ ಈ ರಸ್ತೆ ಹಲವು ಸಮಯದಿಂದ ದುಃಸ್ವಪ್ನವಾಗಿ ಕಾಡುತ್ತಿದೆ. ಅಲೆವೂರು - ಉಡುಪಿ ರಸ್ತೆ ಮಧ್ಯೆ ಸಿಗುವ ಕುಕ್ಕಿಕಟ್ಟೆ ರಸ್ತೆಯಲ್ಲಂತೂ ಗುಂಡಿಗಳದ್ದೇ ದರ್ಬಾರ್. ಇಲ್ಲಿ ಮುಖ್ಯ ರಸ್ತೆಯ ಡಾಂಬರು ಕಿತ್ತು ಹೋಗಿ ದೊಡ್ಡ ಗುಂಡಿಗಳು ನಿರ್ಮಾಣಗೊಂಡಿವೆ. ರಸ್ತೆಯ ಅಲ್ಲಲ್ಲಿ ಚಿಕ್ಕದಾಗಿದ್ದ ಹೊಂಡಗಳ ಗಾತ್ರ ಮಳೆಗೆ ಬೃಹದಾಕಾರವಾಗಿ ಮಾರ್ಪಟ್ಟಿವೆ.

ಅಲೆವೂರು, ಕಾರ್ಕಳ, ಕಟಪಾಡಿಯಿಂದ ಬರುವ ವಾಹನ ಸವಾರರು ಇಲ್ಲಿ ಹೊಂಡಗುಂಡಿಗಳನ್ನು ತಪ್ಪಿಸಲು ಸರ್ಕಸ್‌ ಮಾಡಿಕೊಂಡು ಪ್ರಯಾಣಿಸಬೇಕು. ಇನ್ನು ಆಯತಪ್ಪಿ ಸವಾರರು ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆಗಳು ಇಲ್ಲಿ ಲೆಕ್ಕವೇ ಇಲ್ಲ.

ಈ ರಸ್ತೆಯಲ್ಲಿ ವಾಹನ ದಟ್ಟಣೆಯೂ ಹೆಚ್ಚಾಗಿದ್ದು, ಮೊದಲೇ ಹದಗೆಟ್ಟ ರಸ್ತೆ ಇನ್ನಷ್ಟೂ ಕೆಟ್ಟಿವೆ. ದ್ವಿಚಕ್ರ ವಾಹನ ಸವಾರರಂತೂ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ಇಲ್ಲಿ ಸಂಚರಿಸಬೇಕು. ರಸ್ತೆ ಹದಗೆಡಲು ಒಳಚರಂಡಿ ಅವ್ಯವಸ್ಥೆ ಕೂಡ ಕಾರಣ. ನಗರಸಭೆ ವ್ಯಾಪ್ತಿಯ ಈ ರಸ್ತೆ ರಿಪೇರಿಗಾಗಿ ವಾಹನ ಸವಾರರು ಕಾಯುತ್ತಿದ್ದಾರೆ. ಇದೀಗ ಮಳೆ ಕ್ಷೀಣಗೊಂಡಿದ್ದು ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಬೇಕಿದೆ.

Edited By : Nagesh Gaonkar
Kshetra Samachara

Kshetra Samachara

30/09/2022 05:16 pm

Cinque Terre

10.17 K

Cinque Terre

1