ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ: ರಾಷ್ಟ್ರೀಯ ಹೆದ್ದಾರಿ, ಟೋಲ್ ಫ್ಲಾಝಾ ಸಮಸ್ಯೆಗಳನ್ನು ಶೀಘ್ರ ಸರಿಪಡಿಸಿ: ರಾ.ಹೆ ಜಾಗೃತಿ ಸಮಿತಿ ಒತ್ತಾಯ

ಕೋಟ: ಸಾಸ್ತಾನ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ರಾಷ್ಟ್ರೀಯ ಹೆದ್ದಾರಿ 66ರ ಅವ್ಯವಸ್ಥೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಸಾಸ್ತಾನ ಟೋಲ್ ಮ್ಯಾನೇಜರ್‌ಗೆ ಮನವಿ ಸಲ್ಲಿಸಿತು.

ಕುಂದಾಪುರದಿಂದ ಪಡುಬಿದ್ರಿವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಲಗಳಲ್ಲಿ ಮಳೆಯಿಂದಾಗಿ ಮಣ್ಣು ಕೊಚ್ಚಿ ಹೋಗಿದ್ದು ಅದಕ್ಕೆ ಮಣ್ಣು ತುಂಬಿಸುವುದು, ಹೆದ್ದಾರಿಯಲ್ಲಿರುವ ಸ್ತ್ರೀಟ್ ಲೈಟ್‌ಗಳು ಹಾಳಾಗಿದ್ದು ಅವನ್ನು ಶೀಘ್ರ ದುರಸ್ತಿಪಡಿಸಬೇಕು. ಸಾಸ್ತಾನದ ಟೋಲ್ ಪ್ಲಾಜಾ ಬಳಿ ಹೆದ್ದಾರಿಯ ಎರಡೂ ಬದಿಗಳಲ್ಲಿ ನಿಲ್ಲಿಸುವ ವಾಹನವನ್ನು ತೆರವುಗೊಳಿಸಿ ಸಂಚರಿಸುವ ವಾಹನಗಳಿಗೆ ದಾರಿ ಸುಗಮಗೊಳಿಸಬೇಕು, ಟೋಲ್ ಹತ್ತಿರ ತ್ರಿಚಕ್ರ ವಾಹನ ಹಾಗೂ ದ್ವಿಚಕ್ರ ವಾಹನಗಳು ಓಡಾಡುವ ಪಥದಲ್ಲಿ ಎತ್ತರದ ಹಂಪ್ ಹಾಕಿದ್ದು ಅದನ್ನು ತೆರವು ಗೊಳಿಸಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಸಮಿತಿ ಮನವಿ ಮಾಡಿತು.

ಇದಲ್ಲದೆ, ಹೆದ್ದಾರಿಯ ಎರಡೂ ಬದಿಗಳಲ್ಲಿ ಸಂಗ್ರಹಗೊಂಡ ಕಲ್ಲು–ಮಣ್ಣು, ಕಸ, ಗಿಡಗಂಟಿಗಳನ್ನು ಸ್ವಚ್ಛಗೊಳಿಸಬೇಕು, ಹಾಳಾಗಿರುವ ಸೂಚನಾ ಫಲಕಗಳನ್ನು ದುರಸ್ತಿಗೊಳಿಸಬೇಕು. ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ಇದೆ. ಆದರೆ, ಕೆಲವೊಮ್ಮೆ ಸ್ಥಳೀಯ ವಾಹನಗಳು ಟೋಲ್ ಗೇಟ್ ದಾಟಿದರೂ ಫಾಸ್ಟ್ ಟ್ಯಾಗ್ ಖಾತೆಯಿಂದ ಟೋಲ್ ದರ ಕಡಿತಗೊಳ್ಳುತ್ತದೆ ಎಂಬುದೂ ಹಲವರ ದೂರಾಗಿದೆ. ಟೋಲ್ ಸಿಬ್ಬಂದಿಗೆ ಈ ಬಗ್ಗೆ ಸೂಕ್ತ ತಿಳುವಳಿಕೆ ನೀಡಬೇಕು ಎಂದು ಸಮಿತಿ ಆಗ್ರಹಿಸಿದೆ. ಮನವಿ ಸ್ವೀಕರಿಸಿದ ನವಯುಗ ಕಂಪೆನಿಯ ಟೋಲ್ ಮ್ಯಾನೇಜರ್ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

Edited By : Shivu K
Kshetra Samachara

Kshetra Samachara

20/09/2022 11:31 am

Cinque Terre

9.38 K

Cinque Terre

1

ಸಂಬಂಧಿತ ಸುದ್ದಿ