ಸುರತ್ಕಲ್: ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಸಮೀಪದ ವಿದ್ಯಾದಾಯಿನಿ ಶಾಲೆಯ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತು ಅವ್ಯವಸ್ಥೆಗಳ ಆಗರವಾಗಿ ಪರಿಣಮಿಸಿದೆ.
ಭಾರಿ ಮಳೆಗೆ ಅಂಡರ್ ಪಾಸ್ ಒಳಗಡೆ ಕೃತಕ ನೆರೆ ಉಂಟಾಗಿದ್ದು ಶಾಲಾ ಮಕ್ಕಳಿಗೆ ನಡೆದಾಡಲು ತೀವ್ರ ತೊಂದರೆಯಾಗಿದೆ. ಕಳೆದ ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳ್ಳುವಾಗ ಸುರತ್ಕಲ್ ವಿದ್ಯಾದಾಯಿನಿ ಶಾಲೆ ಬಳಿ ಹೆದ್ದಾರಿ ಶಾಲಾ ಮಕ್ಕಳಿಗೆ ನಡೆದಾಡಲು ಇಲಾಖೆಯಿಂದ ಅಂಡರ್ ಪಾಸ್ ನಿರ್ಮಿಸಲಾಗಿತ್ತು. ಆದರೆ ಅಂಡರ್ ಪಾಸ್ ಒಳಗಡೆ ಕತ್ತಲು ಆವರಿಸಿದ್ದು ನಡೆದುಕೊಂಡು ಹೋಗಲು ಭಯಭೀತ ವಾತಾವರಣವೂ ಇದೆ.
ಈ ನಡುವೆ ಜೋರಾಗಿ ಮಳೆ ಬಂದರೆ ಮಳೆ ನೀರು ನಿಂತು ಮಕ್ಕಳ ಸಮಸ್ಯೆ ಕೇಳುವವರಿಲ್ಲದಂತಾಗಿದೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
14/09/2022 06:00 pm