ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಸೆ. 2ರಂದು ಪ್ರಧಾನಿ ಮೋದಿ ಆಗಮನ ಹಿನ್ನೆಲೆ; ರಸ್ತೆಗಳಿಗೆ ತರಾತುರಿ ತೇಪೆ ಭಾಗ್ಯ!

ಮಂಗಳೂರು: ನಗರಾದ್ಯಂತ ರಸ್ತೆಗಳಲ್ಲಿ ಅಲ್ಲಲ್ಲಿ ಹೊಂಡ- ಗುಂಡಿಗಳು ನಿರ್ಮಾಣವಾಗಿ ಜನರು ಸಂಕಷ್ಟಕ್ಕೊಳಗಾಗಿ ತೊಂದರೆ ಪಡುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು, ಜಿಲ್ಲಾಡಳಿತ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟೆಂಬರ್ 2 ರಂದು ಕಡಲನಗರಿ ಮಂಗಳೂರಿಗೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಇದೀಗ ತರಾತುರಿಯಲ್ಲಿ ರಸ್ತೆಗಳಿಗೆ ತೇಪೆ ಹಚ್ಚುವ ಕಾರ್ಯ ಮಾಡುತ್ತಿದೆ.

ಮೋದಿಯವರು ಯಾವ ಮಾರ್ಗದಲ್ಲಿ ಬರುತ್ತಾರೆಂಬುದು ಇನ್ನೂ ದೃಢವಾಗಿಲ್ಲ. ಆದರೆ, ಮೋದಿ ಬರಬಹುದೆಂಬ ಸಾಧ್ಯತೆಯಿರುವ ರಸ್ತೆಗಳಲ್ಲಿ ತರಾತುರಿಯ ಕಾಮಗಾರಿ ಆರಂಭವಾಗಿದೆ. ಮೋದಿಯವರು ಮೊದಲು ಕೇರಳಕ್ಕೆ ಬಂದು ಬಳಿಕ ಮಂಗಳೂರಿಗೆ ಆಗಮಿಸಲಿದ್ದಾರೆ. ಆದರೆ, ಅವರು ಕೇರಳದಿಂದ ಯಾವ ಮಾರ್ಗದಲ್ಲಿ ಬರುತ್ತಾರೆ ಅನ್ನೋದು ಇನ್ನು ತಿಳಿದು ಬಂದಿಲ್ಲ.

ಕೇರಳದಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಮಂಗಳೂರಿನ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸುವ ಸಾಧ್ಯತೆಯಿದೆ. ಅದಕ್ಕಾಗಿ ಕಾರ್ಯಕ್ರಮ ನಡೆಯುವ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಮೂರು ಹೆಲಿಪ್ಯಾಡ್ ನಿರ್ಮಾಣಕ್ಕೆ ತಯಾರಿ ನಡೆಯುತ್ತಿದೆ. ಆದರೆ, ಹವಾಮಾನ ವೈಪರೀತ್ಯವಾದಲ್ಲಿ ಕೇರಳದಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ಬರಲಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಿಂದ ಗೋಲ್ಡ್ ಫಿಂಚ್ ಸಿಟಿಗೆ ಬರುವ ರಸ್ತೆ ಸಂಪೂರ್ಣ ಗುಂಡಿಮಯವಾಗಿದೆ‌. ಆದ್ದರಿಂದ ತರಾತುರಿಯಲ್ಲಿ ಮಳೆ ನಡುವೆಯೇ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರು ರಸ್ತೆಗಳು ಟ್ರೋಲ್ ಗೆ ಒಳಗಾಗುತ್ತಿದೆ. ಮೋದಿಯವರ ಟ್ವಿಟರ್ ಅಕೌಂಟ್ ಅನ್ನು ಎಡಿಟ್ ಮಾಡಿ ತುಳು ಭಾಷೆಯಲ್ಲಿ ರಸ್ತೆ ಅವ್ಯವಸ್ಥೆ ಬಗ್ಗೆ ಬರೆಯಲಾಗಿದೆ.

'ರಸ್ತೆ ಗುಂಡಿ ಮುಚ್ಚಿ ಆಯ್ತಾ? ನಾನು ಬಂದಾಗ ಒಂದು ಗುಂಡಿ ಕಾಣಿಸಿದ್ರೂ ವಾಪಸ್ ಹೋಗುತ್ತೇನೆ' ಎಂದು ಮೋದಿ ಹೇಳುವ ಹಾಗೆ ಅಣಕಿಸಲಾಗಿದೆ. ಅದೇನೆ ಇದ್ದರೂ ಮೋದಿ ಬರುವ ಹಿನ್ನೆಲೆಯಲ್ಲಿ ಮಾತ್ರ ಈ ರೀತಿ ಕಾಮಗಾರಿ ನಡೆಸುತ್ತಿರುವುದು ಜಿಲ್ಲಾಡಳಿತಕ್ಕೆ ನಾಚಿಕೆಗೇಡು.

Edited By : Shivu K
Kshetra Samachara

Kshetra Samachara

27/08/2022 04:01 pm

Cinque Terre

5.07 K

Cinque Terre

4

ಸಂಬಂಧಿತ ಸುದ್ದಿ