ಉಡುಪಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಭಟ್ಕಳ ಮತ್ತು ಮುರ್ಡೇಶ್ವರ ನಡುವೆ ಕೊಂಕಣ ರೈಲ್ವೆ ಹಳಿಯ ಮೇಲೆ ನೀರು ನಿಂತಿದ್ದು ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಸಂಚಾರ ಅಸ್ತವ್ಯಸ್ತಗೊಂಡಿದೆ.
ರೈಲು ಹಳಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಕಾರ್ಯ ಭರದಿಂದ ನಡೆದಿದ್ದು ಪೂರ್ಣಗೊಂಡ ಬಳಿಕ ಸಂಚಾರ ಪುನರಾರಂಭಗೊಳ್ಳುವ ಸಾಧ್ಯತೆ ಇದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ಹಳಿಗೆ ನೀರು ನುಗ್ಗಿರುವುದರಿಂದ ಒಂದು ರೈಲಿನ ಸಂಚಾರವನ್ನು ರದ್ದುಗೊಂಡಿದೆ. ಕಾರವಾರ-ಯಶವಂತಪುರ
ರೈಲು ಹೊನ್ನಾವರ ನಿಲ್ದಾಣದಲ್ಲಿ ನಿಂತಿದ್ದರೆ ,ಉಳಿದ ರೈಲುಗಳು ಸೇನಾಪುರ, ಅಂಕೋಲ, ಶೀರೂರು, ಭಟ್ಕಳ ಹಾಗೂ ಉಡುಪಿ ನಿಲ್ದಾಣಗಳಲ್ಲಿ ನಿಂತಿವೆ.
Kshetra Samachara
02/08/2022 06:04 pm