ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಣಿಪಾಲ: ಧರೆಗುಳಿದ ಬೃಹತ್ ಗಾತ್ರದ ಶಿಥಿಲ ನೀರಿನ ಟ್ಯಾಂಕ್ !

ಮಣಿಪಾಲ: ಇಲ್ಲಿಗೆ ಸಮೀಪದ ಪರ್ಕಳದ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿಯ ಪಕ್ಕದ ಬೃಹತ್ ಗಾತ್ರದ ನೀರಿನ ಟ್ಯಾಂಕ್ ಧರೆಗುರುಳಿದೆ. ಶೀತಲಾವಸ್ಥೆಯಲ್ಲಿದ್ದ ಸುಮಾರು 50 ಸಾವಿರ ಲೀಟರ್ ಸಾಮರ್ಥ್ಯ ಹೊಂದಿದ ಹಳೆಯ ನೀರಿನ ಟ್ಯಾಂಕ್ ಇದಾಗಿದೆ. 80 ಬಡಗಬೆಟ್ಟಿಗೆ ಹೋಗುವ ಜನನಿಬಿಡ ರಸ್ತೆ ಪಕ್ಕವೇ ಇದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಪರ್ಕಳ ಎಜುಕೇಶನ್ ಸೊಸೈಟಿಯ ಈ ಜಾಗದಲ್ಲಿ ಹಿಂದೆ ಅಂಗನವಾಡಿ ಕಟ್ಟಡ ಕೂಡ ಇತ್ತು.

ಇದೀಗ ಮುಚ್ಚಲ್ಪಟ್ಟಿರುವುದರಿಂದ ಈ ಕಟ್ಟಡದಲ್ಲಿ ಯಾರು ಇಲ್ಲದೇ ಇರುವುದರಿಂದ ಪ್ರಾಣ ಹಾನಿ ಸಂಭವಿಸಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ ಇಂತಹ ನಿರುಪಯುಕ್ತ ಶಿಥಿಲ ನೀರಿನ ಟ್ಯಾಂಕ್ ಇದ್ದಲ್ಲಿ ಕೂಡಲೇ ತೆರವುಗೊಳಿಸುವ ಕಾರ್ಯ ಮಾಡಬೇಕು. ಈ ಪ್ರಕರಣ ನಗರಸಭೆಯ ಅಧ್ಯಕ್ಷರ ವಾರ್ಡು ಹಾಗೂ ಅವರ ಮನೆಯ ಸಮೀಪ ನಡೆದಿರುವುದು ತುಂಬಾ ಖೇದಕರ. ತಕ್ಷಣ ಇದನ್ನು ತೆರವು ಮಾಡಬೇಕು. ಇತರ ಕಡೆ ಇಂತಹ ಶಿಥಿಲಾವಸ್ಥೆ ಯಲ್ಲಿರುವ ನೀರಿನ ಟ್ಯಾಂಕ್‌ಗಳನ್ನು ಕೂಡಲೇ ನೆಲಸಮ ಮಾಡಬೇಕು ಎಂದು ಸ್ಥಳೀಯರಾದ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ರಾಜೇಶ್ ಪ್ರಭು ಪರ್ಕಳ ಒತ್ತಾಯಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

02/08/2022 03:39 pm

Cinque Terre

3.1 K

Cinque Terre

0