ಮುಲ್ಕಿ: ಹಳೆಯಂಗಡಿ ಪಕ್ಷಿಕೆರೆ ಕಟೀಲು ಲೋಕೋಪಯೋಗಿ ಹೆದ್ದಾರಿಯ ಬೊಳ್ಳೂರು ಕಾನ್ವೆಂಟ್ ಬಳಿ ರಸ್ತೆ ಅವ್ಯವಸ್ಥೆಗಳ ಆಗರವಾಗಿದ್ದು ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಕಳೆದ ತಿಂಗಳ ಹಿಂದೆ ಈ ಪ್ರದೇಶದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ, ನೀರು ಹರಿದು ಹೋಗಲು ಸೂಕ್ತವಾದ ಮೋರಿ ನಿರ್ಮಿಸಿದ್ದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದ್ದು ಹೆದ್ದಾರಿ ಮರಣ ಗುಂಡಿಯಾಗಿದೆ.
ಭಾರಿ ಮಳೆಗೆ ಹೆದ್ದಾರಿಯಲ್ಲಿ ಉಂಟಾದ ಹೊಂಡಗಳಲ್ಲಿ ನೀರು ತುಂಬಿ ಅತಿ ವೇಗದಿಂದ ಬರುವ ವಾಹನ ಸರವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ರಸ್ತೆ ಅಂದಾಜು ತಿಳಿಯದೆ ಹೊಂಡಕ್ಕೆ ಬಿದ್ದು ಮಾರಣಾಂತಿಕ ಗಾಯಗಳಾಗಿವೆ.
ಕಟೀಲು, ಕಿನ್ನಿಗೋಳಿ, ಪಕ್ಷಿಕೆರೆ, ಹಳೆಯಂಗಡಿ, ಮಂಗಳೂರು ಕಡೆಗೆ ಹೋಗುವ ಈ ರಸ್ತೆಯಲ್ಲಿ ನಿಮಿಷಕ್ಕೊಂದರಂತೆ ವಾಹನ ಸಂಚಾರವಿದ್ದು ಬೊಳ್ಳೂರು ಬಳಿ ರಸ್ತೆ ಅವ್ಯವಸ್ಥೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ.
ಕೂಡಲೇ ಲೋಕೋಪಯೋಗಿ ಇಲಾಖೆ ಎಚ್ಚೆತ್ತು ತಾತ್ಕಾಲಿಕ ನೆಲೆಯಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಕಿರಣ್ ಪಕ್ಷಿಕೆರೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
Kshetra Samachara
08/07/2022 04:49 pm