ಮುಲ್ಕಿ: ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜಿನಡ್ಕ ಮುರತಕಟ್ಟ ಬಳಿ ಜಲ ಜೀವನ್ ಮಿಷನ್ ಕುಡಿಯುವ ನೀರಿನ ಅವೈಜ್ಞಾನಿಕ ಕಾಮಗಾರಿಯಿಂದ ಜಲಮೂಲ ನಾಶವಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುರತಕಟ್ಟ ಬಳಿ ಜಲಜೀವನ್ ಕಾಮಗಾರಿಯಲ್ಲಿ ಕುಡಿಯುವ ನೀರಿನ ಬಾವಿ ತೋಡಿದ್ದು, ಅದರ ಜೇಡಿ ಮಣ್ಣನ್ನು ಸಾರ್ವಜನಿಕ ತೋಡಿಗೆ ಹಾಕಿದ್ದರಿಂದ ಕೃತಕ ನೆರೆ ಹಾಗೂ ಎಕರೆಗಟ್ಟಲೆ ಕೃಷಿ ನಾಶ ಭೀತಿ ಎದುರಾಗಿದೆ.ಕುಡಿಯುವ ನೀರಿನ ಬಾವಿ ಕಾಮಗಾರಿ ಕಳಪೆಯಾಗಿದ್ದು, ಬುಡದಲ್ಲಿ ಬಿರುಕು ಉಂಟಾಗಿ ಕುಸಿಯುವ ಭೀತಿ ಎದುರಾಗಿದೆ.
ಸ್ಥಳೀಯ ಸಾಮಾಜಿಕ ಕಾರ್ಯಕರ್ತ ದಿನೇಶ್ಚಂದ್ರ ಅಜಿಲ "ಪಬ್ಲಿಕ್ ನೆಕ್ಸ್ಟ್" ಜೊತೆ ಮಾತನಾಡಿ, ಈ ಬಗ್ಗೆ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ದೂರು ನೀಡಿದ್ದರೂ ತೋಡಿನ ಹೂಳು ತೆಗೆಯಲು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅತಿಕಾರಿ ಬೆಟ್ಟು ಗ್ರಾಪಂ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
Kshetra Samachara
19/06/2022 01:05 pm