ಮಣಿಪಾಲ: ಉಡುಪಿ ಎಂದ ತಕ್ಷಣ ʼಸ್ವಚ್ಛ ಉಡುಪಿʼ ಸ್ಲೋಗನ್ ನೆನಪಾಗುತ್ತದೆ. ಸ್ವಚ್ಛತೆಯಲ್ಲಿ ಹಲವು ಪುರಸ್ಕಾರಗಳನ್ನು ಪಡೆದಿರುವ ಹೆಗ್ಗಳಿಕೆ ಉಡುಪಿಗಿದೆ. ಆದರೆ, ಪಕ್ಕದ ಮಣಿಪಾಲದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ.
ಮಣಿಪಾಲ ಸಿಂಡಿಕೇಟ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯುದ್ದಕ್ಕೂ ಗಗನಚುಂಬಿ ಕಟ್ಟಡಗಳಿವೆ. ಇಲ್ಲಿನ ಮಾಂಡೋವಿ ಎಮರಾಲ್ಡ್ ವಾಣಿಜ್ಯ ಮಳಿಗೆ ಮುಂಭಾಗದಲ್ಲಿ ಓಪನ್ ಡ್ರೈನೇಜ್ ಇದ್ದು, ಬಿಯರ್ - ಪ್ಲಾಸ್ಟಿಕ್ ಬಾಟಲ್ ಗಳಿಂದ ಡ್ರೈನೇಜ್ ತುಂಬಿಹೋಗಿದೆ.
ಸಂಜೆ- ರಾತ್ರಿ ವೇಳೆ ವಿದ್ಯಾರ್ಥಿಗಳು ನೀರಿನ ಬಾಟಲ್ ಹಾಗೂ ಬಿಯರ್ ಬಾಟಲ್ ಗಳನ್ನು ಇಲ್ಲೇ ಎಸೆಯುತ್ತಾರೆ. ಮೊದಲೇ ಇಲ್ಲಿ ಮಳೆ ನೀರು ನಿಂತು ಸೊಳ್ಳೆ ಉತ್ಪತ್ತಿ ತಾಣವಾಗಿ ಮಾರ್ಪಟ್ಟಿದ್ದರೂ ನಗರಸಭೆ ಗಮನಿಸಿದಂತಿಲ್ಲ. ಪ್ರತಿನಿತ್ಯ ಸಾವಿರಾರು ಜನ ಓಡಾಡೋ ಈ ಭಾಗದಲ್ಲಿ ಮಲೇರಿಯಾ, ಡೆಂಘಿ ಭೀತಿ ಎದುರಾಗಿದ್ದು, ನಗರಸಭೆ ತಕ್ಷಣ ಇತ್ತ ಚಿತ್ತ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
Kshetra Samachara
03/06/2022 01:33 pm