ಕಟೀಲು: ಸಮಾಜ ಸೇವೆಯೊಂದಿಗೆ ದೇಶ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಭಾರತ ಸ್ವಾತಂತ್ಯದ ಅಮೃತಮಹೋತ್ಸವ ಸಂದರ್ಭದಲ್ಲಿ ಕಟೀಲು ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನಲ್ಲಿ ಕ್ಯಾಪ್ಸ್ ಪೌಂಡೇಶನ್ ವತಿಯಿಂದ ನಿರ್ಮಾಣಗೊಂಡ ವಿಜ್ಞಾನವನದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ವಿಜ್ಞಾನವನದ ದಾನಿ, ಹಳೆವಿದ್ಯಾರ್ಥಿ ಕ್ಯಾಪ್ಸ್ ಫೌಂಡೇಷನ್ ಅಧ್ಯಕ್ಷ ಸಿ.ಎ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸೋಣ. ಕಾರ್ಯಕ್ರಮಗಳಲ್ಲಿ ನೀರಿನ ಬಾಟಲಿ ಬಳಸದಿರೋಣ. ತೆರಿಗೆ ಕಟ್ಟುವುದನ್ನು ರೂಢಿಸಿಕೊಳ್ಳಬೇಕು ಆ ಮೂಲಕ ದೇಶಕ್ಕಾಗಿ ನಮ್ಮ ಕೊಡುಗೆ ಕೊಡೋಣ. ಇಲ್ಲಿನ ವಿಜ್ಞಾನ ಪಾರ್ಕ್ ಸದುಪಯೋಗವನ್ನು ಕಟೀಲು ಅಲ್ಲದೆ ಇತರ ಶಾಲೆಗಳ ಮಕ್ಕಳೂ ಪಡೆಯಬೇಕೆಂದರು. ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಆಶೀರ್ವಾಚನಗೈದರು. ಕಾರ್ಯಕ್ರಮದಲ್ಲಿ ದಾನಿಗಳು ಕ್ಯಾಪ್ಸ್ ಪೌಂಡೇಷನ್ ನ ಸ್ಥಾಪಕಾಧ್ಯಕ್ಷ ಸಿ.ಎ ಚಂದ್ರಶೇಖರ ಶೆಟ್ಟಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಕಟೀಲು ದೇಗುಲದ ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ, ಮುಂಡ್ಕೂರು ದೇವಸ್ಥಾನದ ಅರ್ಚಕ ರಾಮದಾಸ ಆಚಾರ್ಯ, ದಾನಿಗಳಾದ ಚಂದ್ರಶೇಖರ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
21/05/2022 11:19 am