ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪಬ್ಲಿಕ್ ನೆಕ್ಸ್ಟ್ ವರದಿ ಫಲಶೃತಿ

ವರದಿ: ರಹೀಂ ಉಜಿರೆ

ಉಡುಪಿ: ಆರೋಗ್ಯಾಧಿಕಾರಿಗಳಿಂದ ನೀರು ಬಿಡುತ್ತಿದ್ದವರಿಗೆ ತರಾಟೆ, ತ್ಯಾಜ್ಯ ತೆರವುಗೊಳಿಸುವಂತೆ ತಾಕೀತು!

ಉಡುಪಿ: "ಡ್ರೈನೇಜ್ ನೀರು ರಾಜಾ ಕಾಲುವೆಗೆ: ಸ್ಥಳೀಯಾಡಳಿತದ ವಿರುದ್ಧ ಜನರ ಆಕ್ರೋಶ!" ಎಂಬ ಪಬ್ಲಿಕ್ ನೆಕ್ಸ್ಟ್ ವರದಿಗೆ ಎಚ್ಚೆತ್ತ ಆರೋಗ್ಯಾಧಿಕಾರಿಗಳು ಇಂದು ಸ್ಥಳಕ್ಕೆ ಭೇಟಿ ನೀಡಿ ಡ್ರೈನೇಜ್ ನೀರು ಬಿಡುತ್ತಿರುವವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ಉದ್ಯಾವರ ಸಮೀಪದ ಕಡೆಕಾರು ಪಂಚಾಯತ್ ವ್ಯಾಪ್ತಿಯ ಬಲಾಯಿಪಾದೆಯಲ್ಲಿ ಅಪಾರ್ಟ್‌ಮೆಂಟ್‌ಗಳ ಡ್ರೈನೇಜ್ ನೀರನ್ನು ನೇರವಾಗಿ ರಾಜಾ ಕಾಲುವೆಗೆ ಬಿಡಲಾಗುತ್ತಿತ್ತು. ಇದರಿಂದಾಗಿ ವರ್ಷಗಟ್ಟಳೆ ನಿಂತಿದ್ದ ಈ ಕೊಳಚೆ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಊರಲ್ಲಿ ಡೆಂಘಿ, ಮಲೇರಿಯಾ ಹರಡಲು ಕಾರಣವಾಗುತ್ತಿತ್ತು. ಹಲವು ಸಮಯಗಳಿಂದ ಸ್ಥಳೀಯ ನಿವಾಸಿಗಳು ಪಂಚಾಯತ್ ಮತ್ತು ನಗರಸಭೆಗೆ ದೂರು ಕೊಟ್ಟರೂ ಪ್ರಯೋಜನವಾಗಿರಲಿಲ್ಲ. ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಅನ್ನು ಸಂಪರ್ಕಿಸಿ ತಮ್ಮ ಅಹವಾಲನ್ನು ತೋಡಿಕೊಂಡಿದ್ದರು.

ಈ ಕುರಿತ ವಿಸ್ತೃತ ವರದಿ ಪಬ್ಲಿಕ್ ನೆಕ್ಸ್ಟ್ ನಲ್ಲಿ ಬರುತ್ತಲೇ ಎಚ್ಚೆತ್ತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಂಬಂಧಪಟ್ಟ ಕಟ್ಟಡ ಮಾಲೀಕರನ್ನು ಕರೆದು ತಕ್ಷಣ ತ್ಯಾಜ್ಯ ನೀರು ಹೊರಬಿಡವುದನ್ನು ನಿಲ್ಲಿಸಬೇಕು ಮತ್ತು ಸೂಕ್ತ ಡ್ರೈನೇಜ್ ವ್ಯವಸ್ಥೆ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

17/05/2022 07:37 pm

Cinque Terre

6.57 K

Cinque Terre

1

ಸಂಬಂಧಿತ ಸುದ್ದಿ