ಮುಲ್ಕಿ: ಮುಲ್ಕಿ ವಿಜಯ ಕಾಲೇಜು ಕಕ್ವ ಮಟ್ಟು ಸಂಪರ್ಕ ರಸ್ತೆಯ ಬಾಳೆಹಿತ್ಲು ಬಳಿ ಅಪಾಯಕಾರಿ ಪಾಳುಬಿದ್ದ ಬಾವಿ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೌದು ನಿತ್ಯ ಸಾವಿರಾರು ವಾಹನಗಳು ಓಡಾಟ ನಡೆಸುತ್ತಿರುವ ಈ ರಸ್ತೆ ಅಂಚಿನಲ್ಲಿ ಬಾವಿ ಇದ್ದು ಬಾವಿಯ ಮೇಲ್ಗಡೆ ಮುಚ್ಚಲಾಗಿದೆ. ಆದರೆ ಬಾವಿ ಬದಿಯಲ್ಲಿ ಅಳವಡಿಸಿದ್ದ ರಕ್ಷಣಾ ಕವಚ ಗಳು ಕಿತ್ತು ಹೋಗಿದ್ದು ರಸ್ತೆಯಲ್ಲಿ ಭಾರಿ ಗಾತ್ರದ ವಾಹನಗಳು ಸಂಚರಿಸಿದರೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ಕಳೆದ ಕೆಲವು ತಿಂಗಳ ಹಿಂದೆ ಈ ರಸ್ತೆಯಲ್ಲಿ ಅಕ್ರಮವಾಗಿ ಮರಳು ಸಹಿತ ಅನೇಕ ಘನ ವಾಹನಗಳ ಓಡಾಟದಿಂದ ರಸ್ತೆ ತೀರಾ ಹದಗೆಟ್ಟಿದ್ದು ಮಳೆಗಾಲದಲ್ಲಿ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.
ಕೂಡಲೇ ನಗರ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಪಾಯಕಾರಿ ಬಾವಿಗೆ ಸೂಕ್ತ ತಡೆ ಬೇಲಿ ನಿರ್ಮಿಸಿ ಅನಾಹುತವನ್ನು ತಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.
Kshetra Samachara
13/05/2022 11:41 am