ಮಂಗಳೂರು: ಪ್ಲಾಸ್ಟಿಕ್ ಫಾರ್ ಚೇಂಜ್ ಫೌಂಡೇಷನ್‌ನಿಂದ ಮಹಿಳಾ ಕಲ್ಯಾಣ ಸಂಸ್ಥೆ ಮತ್ತು ಮಂಗಳೂರು ಮನಪಾ ಸಹಭಾಗಿತ್ವದಲ್ಲಿ ನಗರದ ಪುರಭವನದ ಮಿನಿ ಸಭಾಂಗಣದಲ್ಲಿ ಮೊತ್ತಮೊದಲ ತ್ಯಾಜ್ಯ ನಿರ್ವಾಹಕರ ಸಮಾವೇಶ ನಡೆಯಿತು.
ಈ ಸಮಾವೇಶದಲ್ಲಿ ಸುಮಾರು 600ಕ್ಕೂ ಮಿಕ್ಕಿ ತ್ಯಾಜ್ಯ ಸಂಗ್ರಹಣಾ ಕಾರ್ಮಿಕರು, ಗುಜರಿ ಅಂಗಡಿ ಕಾರ್ಮಿಕರು ಭಾಗವಹಿಸಿದ್ದರು. ಪ್ಲಾಸ್ಟಿಕ್ ಫಾರ್ ಚೇಂಜ್ ಫೌಂಡೇಷನ್ ದಕ್ಷಿಣ ಭಾರತದ ವಿವಿಧ ಕರಾವಳಿ ಪ್ರದೇಶಗಳಲ್ಲಿ ಹರಡಿರುವ ಅಸಂಖ್ಯಾತ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರು ಮತ್ತು ಗುಜರಿ ಕಾರ್ಮಿಕರ ಜೀವನಮಟ್ಟ ಸುಧಾರಣೆ ಮಾಡುವ ನಿಟ್ಟಿನಲ್ಲಿ ಅವಿರತ ಶ್ರಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ತ್ಯಾಜ್ಯ ನಿರ್ವಾಹಕರ ಸಮಾವೇಶ ನಡೆಸುತ್ತಿದೆ.
ಪ್ಲಾಸ್ಟಿಕ್ ಫಾರ್ ಚೇಂಜ್ ಫೌಂಡೇಷನ್ ನಿರ್ದೇಶಕ ಚಂದನ್ ಎಂ.ಸಿ. ಮಾತನಾಡಿ, ನಮ್ಮ ಸಂಸ್ಥೆಯು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಕರಿಗೆ ಉತ್ತಮವಾದ ಬೆಲೆ ನೀಡುತ್ತಿದೆ. ಈ ಮೂಲಕ ಅವರು ಘನತೆಯಿಂದ ಜೀವನ ಮಾಡಲು ಅನುವು ಮಾಡಿಕೊಟ್ಟಿದೆ. ಅಲ್ಲದೆ ಯಾವುದೇ ಗುರುತು ಇಲ್ಲದ 56 ಮಂದಿಗೆ ಆಧಾರ್ ಕೊಟ್ಟಿದೆ. 25 ಮಂದಿಗೆ ಆರೋಗ್ಯ ವಿಮೆ, ಸಾಮಾಜಿಕ ಭದ್ರತೆಗೆ 18ಮಂದಿಗೆ ಈ ಶ್ರಮ ಕಾರ್ಡ್ 8 ಮಂದಿಗೆ ಬ್ಯಾಂಕ್ ಖಾತೆ, 54 ಗುಜರಿ ಅಂಗಡಿಗಳ ಅಭಿವೃದ್ಧಿ, ಮೂಲಸೌಕರ್ಯ ಒದಗಿಸಿದೆ ಎಂದು ಹೇಳಿದರು.
Kshetra Samachara
08/05/2022 05:48 pm