ಮಂಗಳೂರು : ನಗರದ ಡೊಂಗರಕೇರಿಯ ಕೆನರಾ ಶಾಲೆಯ ಪಕ್ಕದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ಇಂಟರ್ ಲಾಕ್ ಕಾಮಗಾರಿ ನಡೆದಿದ್ದು, ಇದೀಗ ಸ್ಥಳೀಯ ನಿವಾಸಿ ಯೊಬ್ಬರು ಅಲ್ಲಿ ಅನಧಿಕೃತವಾಗಿ ಹೂಕುಂಡವನ್ನು ಇರಿಸಿದ್ದಾರೆ. ಅದನ್ನು ತಕ್ಷಣ ತೆರವು ಮಾಡಬೇಕೆಂದು ಡೊಂಗರಕೇರಿ ನಿವಾಸಿಗಳು ಆಗ್ರಹಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ಡೊಂಗರಕೇರಿ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿತ್ತು. ಅಲ್ಲದೆ ಕೆನರಾ ಶಾಲಾ ವಾಹನಗಳು, ರಿಕ್ಷಾಗಳು, ಸಾರ್ವಜನಿಕ ವಾಹನಗಳು ನಿಲ್ಲುವ ಸ್ಥಳದಲ್ಲಿ ಇಂಟರ್ಲಾಕ್ ಕಾಮಗಾರಿ ಮಾಡಲಾಗಿತ್ತು. ಆದರೆ ಇಲ್ಲಿನ ನಿವಾಸಿಯಾಗಿರುವ ವೈದ್ಯರೊಬ್ಬರು ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ಮನೆಯ ಗೇಟ್ ವರೆಗೆ ಹೂಕುಂಡಗಳನ್ನು ಇರಿಸಿದ್ದಾರೆ. ತಕ್ಷಣ ಈ ಅದನ್ನು ತೆರವುಗೊಳಿಸಿ ವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಬೇಕೆಂದು ಮನಪಾ ಆಯುಕ್ತರು, ಬಂದರು ಠಾಣಾ ಪೊಲೀಸರು, ಮಂಗಳೂರು ದಕ್ಷಿಣ ಶಾಸಕರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಅವಲತ್ತುಕೊಂಡಿದ್ದಾರೆ.
ಈ ಬಗ್ಗೆ ಸ್ಥಳೀಯ ನಿವಾಸಿ, ಕಾಂಗ್ರೆಸ್ ಸದಸ್ಯೆ ಮಂಜುಳಾ ನಾಯಕ್ ಮಾತನಾಡಿ, ಡೊಂಗರಕೇರಿ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿ ನಡೆದಿದೆ. ಆದರೆ ಇದೀಗ ಇಲ್ಲಿನ ಪಾರ್ಕಿಂಗ್ ಮಾಡುತ್ತಿದ್ದ ಸ್ಥಳದಲ್ಲಿ ಅನಧಿಕೃತವಾಗಿ ಹೂಕುಂಡಗಳನ್ನು ಇರಿಸಿ ಸಾರ್ವಜನಿಕರಿಗೆ ತೊಂದರೆ ನೀಡಲಾಗುತ್ತಿದೆ.
ತಕ್ಷಣ ಈ ಹೂಕುಂಡಗಳನ್ನು ತೆರವು ಮಾಡಬೇಕೆಂದು ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ. ಮುಂದಿನ 10 ದಿನಗಳಲ್ಲಿ ಈ ಹೂಕುಂಡಗಳನ್ನು ತೆರವುಗೊಳಿಸದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ. ಇದಕ್ಕೆ ಮಂಗಳೂರು ಮನಪಾ ಆಯುಕ್ತರು ಹಾಗೂ ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಆಗ್ರಹಿಸಿದರು.
Kshetra Samachara
04/05/2022 05:17 pm