ಬಜಪೆ: ಕಟೀಲು-ಬಜಪೆ ರಾಜ್ಯ ಹೆದ್ದಾರಿಯಿಂದ ಎಕ್ಕಾರು ಅರಸುಲ ಪದವಿಗೆ ಸಂಪರ್ಕ ಕಲ್ಪಿಸುವ ಚೆನ್ನಯ್ಯ ಪೂಜಾರಿ ರಸ್ತೆಯುದ್ದಕ್ಕೂ ಅಲ್ಲಲ್ಲಿ ಡಾಂಬರು ಕಿತ್ತು ಹೋಗಿದ್ದು ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಈ ರಸ್ತೆಯು ಮುಚ್ಚೂರು ಎಡಪದವು, ಗಂಜಿಮಠ, ಮೂಡಬಿದಿರೆ ಹಾಗೂ ಇನ್ನಿತರ ಕಡೆಗಳಿಗೆ ಸಂಪರ್ಕಿಸುವಂತಹ ತೀರ ಹತ್ತಿರದ ರಸ್ತೆಯಾಗಿದೆ. ದಿನಂಪ್ರತಿ ರಸ್ತೆಯ ಮೂಲಕ ಅನೇಕ ವಾಹನಗಳು ಸಂಚರಿಸುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಡಾಂಬರು ಕಿತ್ತು ಹೋದ ರಸ್ತೆಯ ದುರಸ್ತಿ ಕಾರ್ಯ ನಡೆಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
24/04/2022 04:57 pm